HomeLatest Newsಹಲ್ಲಿನ ಸಂದಿ ಹುಡುಕಿ ಸ್ವಚ್ಛಗೊಳಿಸುತ್ತಂತೆ ಈ ಸ್ಮಾರ್ಟ್ ಬ್ರಷ್: ಬೆಲೆ ಕೇಳಿ ಬೆಚ್ಚಿಬಿದ್ದ ಸಾರ್ವಜನಿಕರು!

ಹಲ್ಲಿನ ಸಂದಿ ಹುಡುಕಿ ಸ್ವಚ್ಛಗೊಳಿಸುತ್ತಂತೆ ಈ ಸ್ಮಾರ್ಟ್ ಬ್ರಷ್: ಬೆಲೆ ಕೇಳಿ ಬೆಚ್ಚಿಬಿದ್ದ ಸಾರ್ವಜನಿಕರು!

ಜಾಗತಿಕ ತಂತ್ರಜ್ಞಾನ ಸಂಸ್ಥೆ ಡೈಸನ್ ಹೊಸದಾಗಿ ಬಿಡುಗಡೆ ಮಾಡಿರುವ 499 ಡಾಲರ್ ಅಂದರೆ ಸರಿಸುಮಾರು 41 ಸಾವಿರ ರೂಪಾಯಿ ಮೌಲ್ಯದ ಎಐ ಟೂತ್‌ಬ್ರಷ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ಕ್ಯಾಮೆರಾಜೆಟ್’ ಎಂದು ಕರೆಯಲ್ಪಡುವ ಈ ಬ್ರಷ್‌ನಲ್ಲಿ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ವಿಷನ್ ಮತ್ತು ಹಲ್ಲುಗಳ ಸಂದಿಗಳನ್ನು ಸ್ವಚ್ಛಗೊಳಿಸುವ ಜೆಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ ಈ ವಿಚಿತ್ರ ತಂತ್ರಜ್ಞಾನದ ಅಗತ್ಯ ನಿಜಕ್ಕೂ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಡೈಸನ್ ಸಂಸ್ಥೆಯು ಸುಮಾರು 4.7 ಲಕ್ಷ ಹಲ್ಲಿನ ಚಿತ್ರಗಳನ್ನು ಬಳಸಿ ಈ ಎಐ ವ್ಯವಸ್ಥೆಯನ್ನು ತರಬೇತಿಗೊಳಿಸಿದೆ. ಈ ಬ್ರಷ್‌ನ ಹೆಡ್ ಭಾಗದಲ್ಲಿ 1 ಲಕ್ಷ ಪಿಕ್ಸೆಲ್ ಹೊಂದಿರುವ ಕ್ಯಾಮೆರಾ ಲೆನ್ಸ್ ಇದ್ದು, ಬ್ರಷ್ ಮಾಡುವಾಗ ಪ್ರತಿಯೊಂದು ಸೆಕೆಂಡಿಗೆ 28 ಚಿತ್ರಗಳನ್ನು ತೆಗೆಯುತ್ತದೆ. ಎಐ ವ್ಯವಸ್ಥೆಯು ಈ ಚಿತ್ರಗಳನ್ನು ವಿಶ್ಲೇಷಿಸಿ ಹಲ್ಲುಗಳ ನಡುವಿನ ಸಂದಿಗಳನ್ನು ಗುರುತಿಸುತ್ತದೆ. ಸಂದಿ ಕಂಡುಬಂದ ತಕ್ಷಣ ಕೇವಲ 100 ಮಿಲಿಸೆಕೆಂಡುಗಳಲ್ಲಿ ಮೌತ್‌ವಾಶ್ ದ್ರವವನ್ನು ಬಲವಾದ ಸ್ಪೇ ಮೂಲಕ ಆ ಜಾಗಕ್ಕೆ ಸಿಂಪಡಿಸುತ್ತದೆ.

ಸರಳವಾದ ಟೂತ್‌ಬ್ರಷ್‌ಗೆ ಕ್ಯಾಮೆರಾ, ಮೆಷಿನ್ ಲರ್ನಿಂಗ್ ಮಾಡೆಲ್ ಮತ್ತು ಜೆಟ್ ತಂತ್ರಜ್ಞಾನ ಸೇರಿಸಿರುವುದಕ್ಕೆ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದು ಅತ್ಯಂತ ಅನಗತ್ಯ ಉತ್ಪನ್ನ ಎಂದು ಟೀಕಿಸಿದ್ದಾರೆ. ಇಷ್ಟು ಸಣ್ಣ ಕೆಲಸಕ್ಕೆ ಎಐ ಮತ್ತು ಕ್ಯಾಮೆರಾ ಅಗತ್ಯವಿದೆಯೇ ಹಾಗೂ 40 ಸಾವಿರಕ್ಕೂ ಹೆಚ್ಚು ಹಣ ನೀಡಿ ಬ್ರಷ್ ಖರೀದಿಸುವುದು ದಡ್ಡತನ ಎಂದು ಹಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೆ, ಬ್ರಷ್ ಮಾಡುವಾಗ ಇಷ್ಟೊಂದು ಬಲವಾಗಿ ದ್ರವ ಸಿಂಪಡಿಸುವುದರಿಂದ ಹಲ್ಲಿನ ಫಿಲ್ಲಿಂಗ್‌ಗಳು ಹೊರಬರುವ ಅಪಾಯವಿದೆ ಮತ್ತು ಸದಾ ಮೌತ್‌ವಾಶ್ ಬಳಸುವುದು ಬಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಕಂಪನಿಗಳು ಅನಗತ್ಯ ಸಾಧನಗಳನ್ನು ಮಾರುಕಟ್ಟೆಗೆ ತರುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“>

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular