HomeEntertainmentಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

ಕ್ಲಾಸ್ ಹಾಗೂ ಮಾಸ್ ಚಿತ್ರಗಳ ಮೂಲಕ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ  ಹಿರಿಯ ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

2007 ರಲ್ಲಿ ತೆರೆಕಂಡ ‘ಸಿಕ್ಸರ್’ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಇವರು ಅದೇ ವರ್ಷ ‘ಗೆಳೆಯ’ ದಲ್ಲಿ ತೆರೆ ಹಂಚಿಕೊಂಡರು. ಬಳಿಕ ‘ಗಂಗೆ ಬಾರೆ ತುಂಗೆ ಬಾರೆ’ ‘ಮೆರವಣಿಗೆ’ ‘ಗುಲಾಮ’ ‘ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.

ಕಳೆದ ವರ್ಷ ‘ತತ್ಸಮ ತದ್ಭವ’ ದಲ್ಲಿ ಕಾಣಿಸಿಕೊಂಡಿದ್ದ, ಪ್ರಜ್ವಲ್ ದೇವರಾಜ್ ಇತ್ತೀಚಿಗೆ ಮಾಫಿಯಾ ಹಾಗೂ ಗಣ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.  ಮಾಫಿಯಾ ಚಿತ್ರ ತಂಡ ಪ್ರಜ್ವಲ್ ದೇವರಾಜ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಟೀಸರ್  ಬಿಡುಗಡೆ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಅವರ ಅಭಿಮಾನಿಗಳಿಂದ ಹಾಗೂ ಸಿನಿ  ತಾರೆಯರಿಂದ  ಶುಭಾಶಯಗಳ  ಮಹಾಪೂರವೇ ಹರಿದು ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular