ಭಾರತಕ್ಕೆ ಲಗ್ಗೆ ಇಟ್ಟಿದೆ ಡುಕಾಟಿಯ ಹೊಸ ಮೋಟಾರ್‌ ಸೈಕಲ್; SUV ಗಿಂತಲೂ ಅಧಿಕವಾಗಿದೆ ಬೆಲೆ !

ಡುಕಾಟಿಯ ಹೊಸ ಬೈಕ್‌ ಭಾರತಕ್ಕೂ ಕಾಲಿಟ್ಟಿದೆ. ಡೆಸರ್ಟ್‌ಎಕ್ಸ್‌ನ ಆಫ್-ರೋಡ್ ಫೋಕಸ್ಡ್ ಆವೃತ್ತಿಯನ್ನು ಡುಕಾಟಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್‌ನ ಹೆಸರು ಡೆಸರ್ಟ್‌ ಎಕ್ಸ್ ರ್ಯಾಲಿ. ಇದರ ಆರಂಭಿಕ ಬೆಲೆ 23.7 ಲಕ್ಷ ರೂಪಾಯಿ. ಈ ಮೊತ್ತಕ್ಕೆ ಭಾರತದಲ್ಲಿ ಹಲವು ಉತ್ತಮ SUV ಗಳು ಲಭ್ಯವಿದೆ. ಸಾಮಾನ್ಯ DesertX ಗೆ ಹೋಲಿಸಿದರೆ, Rally ಆವೃತ್ತಿಯು ಹೆಚ್ಚು ಪ್ರೀಮಿಯಂ ಸಸ್ಪೆನ್ಷನ್‌ ಹೊಂದಿದೆ. ಹಾಗಾಗಿ ಬೆಲೆ ಕೂಡ ಸ್ವಲ್ಪ ಹೆಚ್ಚು.

ಸಾಮಾನ್ಯ DesertX ಕೂಡ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ  ಮೋಟಾರ್‌ಸೈಕಲ್. ಆದರೆ Rally ಆವೃತ್ತಿಯು ಹೆಚ್ಚು ಸುಧಾರಿತ ಸಸ್ಪೆನ್ಷನ್‌ ಸೆಟಪ್ ಹೊಂದಿದೆ, ಇದನ್ನು ಕಯಾಬಾದಿಂದ ಎರವಲು ಪಡೆಯಲಾಗಿದೆ. DesertX Rallyಗೆ 48mm ಕ್ಲೋಸ್ಡ್‌ ಕಾರ್ಟ್ರಿಡ್ಜ್ ಫೋರ್ಕ್‌ಗಳನ್ನು ಒದಗಿಸಲಾಗಿದೆ.

ಹೆಚ್ಚಿನ ಮತ್ತು ಕಡಿಮೆ-ವೇಗದ ಕಂಪ್ರೆಷನ್ ಡ್ಯಾಂಪಿಂಗ್‌ನೊಂದಿಗೆ ಪೂರ್ಣ ಹೊಂದಾಣಿಕೆಯು ಇಲ್ಲಿ ಲಭ್ಯವಿದೆ. ಈ ಹೊಸ ಸಸ್ಪೆನ್ಷನ್‌ನಿಂದಾಗಿ, ಡೆಸರ್ಟ್‌ಎಕ್ಸ್ ರ್ಯಾಲಿಯ ಗ್ರೌಂಡ್ ಕ್ಲಿಯರೆನ್ಸ್ 280 ಎಂಎಂ ಮತ್ತು ಸೀಟ್ ಎತ್ತರವು 910 ಎಂಎಂಗೆ ಹೆಚ್ಚಾಗಿದೆ.

ಇದು ಟ್ಯೂಬ್ ಟೈರ್‌ಗಳು, ಹೈ ಫ್ರಂಟ್ ಫೆಂಡರ್, ಕಾರ್ಬನ್ ಫೈಬರ್ ಸಂಪ್ ಗಾರ್ಡ್, ಅಡ್ಜಸ್ಟೆಬಲ್‌ ಬ್ರೇಕ್ ಮತ್ತು ಗೇರ್ ಪೆಡಲ್‌ಗಳೊಂದಿಗೆ ಸ್ಪೋಕ್ ವೀಲ್‌ಗಳನ್ನು ಹೊಂದಿದೆ. ದೊಡ್ಡದಾದ 21-ಲೀಟರ್ ಇಂಧನ ಟ್ಯಾಂಕ್ ಇದರಲ್ಲಿದೆ. ಹಾಗಾಗಿ ಬೈಕ್‌ನ ತೂಕ ಕೂಡ 211 ಕೆಜಿಯಷ್ಟಿದೆ.

ರ್ಯಾಲಿ ಆವೃತ್ತಿಯು 937cc L-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಇದು 109bhp ಪವರ್ ಮತ್ತು 92Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ 6-ಸ್ಪೀಡ್ ಗೇರ್‌ಬಾಕ್ಸ್, ಎಳೆತ ನಿಯಂತ್ರಣ, ರೈಡ್ ಮೋಡ್‌ಗಳು, ಎಬಿಎಸ್‌ನಂತಹ ವೈಶಿಷ್ಟ್ಯಗಳು ಬೈಕ್‌ನಲ್ಲಿವೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read