ನಶೆಯಲ್ಲಿ ವಿಮಾನದಲ್ಲಿದ್ದ ಪುರುಷ ಸಿಬ್ಬಂದಿಯನ್ನೇ ಚುಂಬಿಸಿದ ಪ್ರಯಾಣಿಕ…!

ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆ, ಏರ್‌ಹೋಸ್ಟ್‌ಗಳ ಜೊತೆಗೆ ಅನುಚಿತ ವರ್ತನೆ. ಗಲಾಟೆ, ಹೊಡೆದಾಟ ಈ ರೀತಿಯ ಹತ್ತಾರು ಪ್ರಕರಣಗಳು ಆಗಾಗ ಕೇಳಿ ಬರ್ತಾನೇ ಇವೆ. ಕೆಲವರಂತೂ ಇದೆಲ್ಲ ಕೇಳಿ-ಕೇಳಿ ವಿಮಾನದಲ್ಲಿ ಪ್ರಯಾಣ ಮಾಡುವುದು ಸೇಫ್ ಹೌದೋ…… ಅಲ್ವೇ ಅಂತ ಅನುಮಾನ ಬಂದಿರುತ್ತೆ. ಇದೀಗ ಮತ್ತೆ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಪ್ರಯಾಣಿಕರೊಬ್ಬರು ವಿಮಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಬಲವಂತವಾಗಿ ಚುಂಬಿಸುವ ಪ್ರಯತ್ನ ಮಾಡಿದ್ದಾರೆ. ಈ ಘಟನೆ ಅಮೆರಿಕಾದ ಅಲಾಸ್ಕಾ ವಿಮಾನದಲ್ಲಿ ನಡೆದಿದ್ದು, 61 ವರ್ಷದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಆ ಸಮಯದಲ್ಲಿ ಅವರು ಮದ್ಯ ಸೇವಿಸಿದ್ದರು ಎಂದು ಹೇಳಲಾಗಿದೆ.

ಅಮೆರಿಕನ್ ನ್ಯೂಸ್ ಪೇಪರ್ ದಿ ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಡೇವಿಡ್ ಅಲನ್ ಬರ್ಕ್ ಎಪ್ರಿಲ್ 10ರಂದು ಮಿನ್ನೆಸೋಟದಿಂದ ಅಲಾಸ್ಕಾಗೆ ಪ್ರಯಾಣ ಮಾಡುತ್ತಿದ್ದರು. ವಿಮಾನದಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವವರಿಗೆ ಮದ್ಯದ ವ್ಯವಸ್ಥೆ ಮಾಡಲಾಗಿರುತ್ತೆ. ಇವರು ಸಹ ಆ ಸಮಯದಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಆದರೆ ಅದಕ್ಕೂ ಕೆಲ ನಿಯಮಗಳಿರುವುದರಿಂದ, ಡೇವಿಡ್ ಅವರಿಗೆ ಹೆಚ್ಚು ಮದ್ಯವನ್ನ ನೀಡಿರಲಾಗಲಿಲ್ಲ. ಆದರೆ ಡೇವಿಡ್ ಮದ್ಯ ಬೇಕೇ ಬೇಕು ಎಂದು ಹಠ ಹಿಡಿದಿದ್ದಾರೆ. ಅವರ ಸಮಾಧಾನಕ್ಕಾಗಿ ರೆಡ್‌‌ ವೈನ್‌ ಕೊಡಲಾಗಿದೆ. ಇದರಿಂದ ತೃಪ್ತಿಗೊಳ್ಳ ಆ ವ್ಯಕ್ತಿ ವಿಮಾನ ಸಿಬ್ಬಂದಿಗಳೊಂದಿಗೆ ಗಲಾಟೆ ಮಾಡಿದ್ದಾರೆ.

ಗಲಾಟೆ ಸಮಯದಲ್ಲಿ ವಿಮಾನದಲ್ಲಿದ್ದ ಫುಡ್ ಡೇಬಲ್‌ನ್ನ ಕೂಡ ಇವರು ಮುರಿದು ಹಾಕಿದ್ದಾರೆ ಎಂದು ಹೇಳಲಾಗಿದೆ. ಅಷ್ಟೆ ಅಲ್ಲ ಪೈಲೆಟ್ ಜೊತೆಗೆ ಅಸಂಬದ್ಧವಾಗಿ ಮಾತನಾಡಿದ್ದಾನೆ ಎಂದು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಹೇಳಲಾಗಿದೆ. ಸದ್ಯಕ್ಕೆ ಪೊಲೀಸರು ಡೇವಿಡ್ ಮೇಲೆ ಕ್ರಮ ಕೈಗೊಂಡಿದ್ದು. ವಿಮಾನದಲ್ಲಿ ಪ್ರಯಾಣಿಕರಿಗೆ ಆದ ಸಮಸ್ಯೆ ಹಾಗೂ ವಿಮಾನದಲ್ಲಿ ಉಂಟಾದ ಹಾನಿ ಇವುಗಳೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read