HomeCrimeಬೆಚ್ಚಿಬೀಳಿಸುವಂತಿದೆ ಮತ್ತೊಂದು ಪ್ರಕರಣ; ಕಳೆದ ಸೆಪ್ಟೆಂಬರ್ ನಲ್ಲೇ ನಡೆದಿತ್ತು ಈ ಘಟನೆ

ಬೆಚ್ಚಿಬೀಳಿಸುವಂತಿದೆ ಮತ್ತೊಂದು ಪ್ರಕರಣ; ಕಳೆದ ಸೆಪ್ಟೆಂಬರ್ ನಲ್ಲೇ ನಡೆದಿತ್ತು ಈ ಘಟನೆ

ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಪ್ರಕರಣಗಳು ಬೆಚ್ಚಿಬೀಳಿಸ್ತಿದ್ದು, ಕಳೆದ ವರ್ಷ ನಡೆದಿರೋ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಕುಡಿದ ಪ್ರಯಾಣಿಕ ಎಂಟು ವರ್ಷದ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದಾಗ ಇದೇ ರೀತಿಯ ಘಟನೆ ಸಂಭವಿಸಿದೆ ಎಂದು ಏರ್‌ಲೈನ್ಸ್ ಹೇಳಿದೆ.

ಸೆಪ್ಟೆಂಬರ್ 5 ರಂದು ಮುಂಬೈ-ಲಂಡನ್ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯನ್ನು ಅಂದು ಮೆಟ್ರೋಪಾಲಿಟನ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“2022 ರ ಸೆಪ್ಟೆಂಬರ್ 5 ರಂದು ಮುಂಬೈ-ಲಂಡನ್ ವಿಮಾನದಲ್ಲಿ ಘಟನೆ ಸಂಭವಿಸಿದೆ ಎಂದು ದೃಢಪಡಿಸಿರುವ ಏರ್ ಇಂಡಿಯಾ ಈ ಬಗ್ಗೆ ಕ್ಯಾಬಿನ್ ಸಿಬ್ಬಂದಿ ತಕ್ಷಣವೇ ಕ್ರಮ ಕೈಗೊಂಡು ಆರೋಪಿಯನ್ನು ಪ್ರತ್ಯೇಕಿಸಿದರು. ಸಂತ್ರಸ್ತೆಯನ್ನು ಸಾಂತ್ವನಗೊಳಿಸಲಾಯಿತು ಮತ್ತು ಆಕೆಯು ಮತ್ತು ಅವರ ಕುಟುಂಬವು ಪರ್ಯಾಯ ಆಸನಗಳಿಗೆ ಸ್ಥಳಾಂತರಿಸಲು ಸಹಾಯ ಮಾಡುವುದು ಸೇರಿದಂತೆ ಎಲ್ಲಾ ಸಹಾಯವನ್ನು ನೀಡಲಾಯಿತು”ಎಂದು ತಿಳಿದುಬಂದಿದೆ.

ವಿಮಾನದಿಂದ ಇಳಿದ ನಂತರ ಆಪಾದಿತ ಅಪರಾಧಿಯನ್ನು ಮೆಟ್ರೋಪಾಲಿಟನ್ ಪೊಲೀಸರು ವಿಮಾನದಿಂದ ಹೊರಕ್ಕೆ ಕರೆದೊಯ್ದರು. ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಮೆಟ್ರೋಪಾಲಿಟನ್ ಪೊಲೀಸರಿಗೆ ಹೇಳಿಕೆಗಳನ್ನು ನೀಡಿದ್ದು ಘಟನೆ ಬಗ್ಗೆ ಸೆಪ್ಟೆಂಬರ್ 19, 2022 ರಂದು DGCA ಗೆ ವರದಿ ಮಾಡಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.

For Latest News Updates, Join Our Whatsapp Community🚩
RELATED ARTICLES

Most Popular