HomeKarnatakaಕುಡಿದ ಮತ್ತಿನಲ್ಲಿ ವಾಹನದಡಿ ಮಲಗಿದ ಭೂಪ: ವ್ಯಕ್ತಿಯ ಮೇಲೆ ಹರಿದು ಹೋದ ಟ್ರಕ್

ಕುಡಿದ ಮತ್ತಿನಲ್ಲಿ ವಾಹನದಡಿ ಮಲಗಿದ ಭೂಪ: ವ್ಯಕ್ತಿಯ ಮೇಲೆ ಹರಿದು ಹೋದ ಟ್ರಕ್

ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನಿಂತಿದ್ದ ಟ್ರಕ್ ಕೆಳಗೆ ಮಲಗಿದ್ದು, ಆತನ ಮೇಲೆಯೇ ಟ್ರಕ್ ಹರಿದು ಹೋದ ಪರಿಣಾಮ ಸ್ಥಳದಲ್ಲೇಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಳ್ಳಕೆರೆ ಗೇಟ್ ಬಳಿಯ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಟ್ರಕ್ ಕೆಳಗೆ ಕಂಠಪೂರ್ತಿ ಕುಡಿದುಬಂದ ವ್ಯಕ್ತಿಯೋರ್ವ ಮಲಗಿದ್ದ. ವ್ಯಕ್ತಿ ಟ್ರಕ್ ಕೆಳಗೆ ಮಲಗಿರುವುದು ಗಮನಕ್ಕೆ ಬಾರದೇ ಚಾಲಕ ಟ್ರಕ್ ಚಲಾಯಿಸಿಕೊಂಡು ಹೋಗಿದ್ದಾನೆ. ವ್ಯಕ್ತಿಯ ಮೇಲೆಯೇ ಟ್ರಕ್ ಹರಿದು ಹೋಗಿದೆ.

ಮೃತ ವ್ಯಕ್ತಿ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular