ವಿಮಾನಯಾನ ವೇಳೆ ಪಾನಮತ್ತ ಪ್ರಯಾಣಿಕರಿಂದ ಸಿಬ್ಬಂದಿಯೊಂದಿಗೆ ಜಗಳ

ವಿಮಾನ ಪ್ರಯಾಣ ವೇಳೆ ಪಾನಮತ್ತರಾಗಿ ಪ್ರಯಾಣಿಕರೊಂದಿಗೆ ಅಸಹನೀಯವಾಗಿ ವರ್ತಿಸಿರೋ ಪ್ರಕರಣಗಳು ಬೆಳಕಿಗೆ ಬರ್ತಿದ್ದು ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ.

ವಿಮಾನ ಪ್ರಯಾಣ ವೇಳೆ ಪಾಟ್ನಾಗೆ ತೆರಳುತ್ತಿದ್ದ ದೆಹಲಿ-ಪಾಟ್ನಾ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕರು ವಿಮಾನಯಾನ ಸಿಬ್ಬಂದಿ ಜೊತೆ ಜಗಳವಾಡಿರೋ ಪ್ರಕರಣ ಮುನ್ನೆಲೆಗೆ ಬಂದಿದೆ.

ವಿಮಾನ ನಿಲ್ದಾಣ ಪೊಲೀಸ್ ಠಾಣೆ ಪೊಲೀಸರು ಅಮಲೇರಿದ ಸ್ಥಿತಿಯಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಏರ್‌ಪೋರ್ಟ್ ಎಸ್‌ಎಚ್‌ಒ ರಾಬರ್ಟ್ ಪೀಟರ್, ಪಾನಮತ್ತ ಪ್ರಯಾಣಿಕರ ಬಂಧನವನ್ನು ಖಚಿತಪಡಿಸಿದ್ದು, ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ. ಇಂಡಿಗೋ ವಿಮಾನ ಸಂಖ್ಯೆ 6E-6383 ನಲ್ಲಿ ಜಗಳ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read