ಪಾನಮತ್ತ ಬೈಕ್ ಸವಾರನೊಬ್ಬ ಮೆಕ್‌ಡೊನಾಲ್ಡ್ಸ್ ಡ್ರೈವ್‌ಥ್ರೂನಲ್ಲಿ ಆರ್ಡರ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಬಿದ್ದಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್‌ನ ಪೂರ್ವ ಸಸ್ಸೆಕ್ಸ್‌ನ ಈಸ್ಟ್‌ಬೌರ್ನ್‌ನಲ್ಲಿ ನಡೆದ ಈ ಘಟನೆಯಲ್ಲಿ ಅಳತೆ ಮೀರಿ ಕುಡಿದ ಕ್ಯಾಮೆರಾನ್ ಡಿಕ್ಸನ್, ನಿಯಂತ್ರಣವಿಲ್ಲದೇ ಬೈಕ್ ಚಾಲನೆ ಮಾಡಿ ಹೀಗೆ ಬಿದ್ದಿದ್ದಾನೆ. ಮೆಕ್‌ಡೊನಾಲ್ಡ್ಸ್‌ನ ಸಿಬ್ಬಂದಿ ಈತನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿ ಮದ್ಯಪಾನ ಪರೀಕ್ಷೆ ಮಾಡಿದ ಪೊಲೀಸರು ಕ್ಯಾಮೆರಾನ್‌ನನ್ನು ಬಂಧಿಸಿದ್ದಾರೆ. 28 ವರ್ಷದ ಈತನಿಗೆ 17 ತಿಂಗಳ ಚಾಲನಾ ನಿಷೇಧ ಹೇರಲಾಗಿದೆ.
https://twitter.com/BBCSussex/status/1661276280614973441?ref_src=twsrc%5Etfw%7Ctwcamp%5Etweetembed%7Ctwterm%5E1661276280614973441%7Ctwgr%5Ef0d9c60cbb698c799e018c72a9437314725ee1a7%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fdrunkdriverfallsoffbikewhileorderingfoodatmcdonaldsdrivethruslappedwith17monthdrivingman-newsid-n504127808