HomeLatest Newsಉಪಹಾರಕ್ಕೂ ಮುನ್ನ ಈ ʼಪಾನೀಯʼ ಸೇವಿಸಿದರೆ ದೇಹದ ಮೇಲಾಗುತ್ತೆ ಈ ಪರಿಣಾಮ

ಉಪಹಾರಕ್ಕೂ ಮುನ್ನ ಈ ʼಪಾನೀಯʼ ಸೇವಿಸಿದರೆ ದೇಹದ ಮೇಲಾಗುತ್ತೆ ಈ ಪರಿಣಾಮ

ದೇಹದ ಸೌಂದರ್ಯವನ್ನು ಹಾಳು ಮಾಡಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಸ್ಪರ್ಧಾಯುಗದಲ್ಲಿ ನಾವೆಷ್ಟು ಬ್ಯುಸಿಯಾಗಿದ್ದೇವೆಂದ್ರೆ ನಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ನೀಡಲು ಆಗ್ತಿಲ್ಲ. ಇದರಿಂದಾಗಿ ನಮಗೆ ತಿಳಿಯದೇ ತೂಕ ಜಾಸ್ತಿಯಾಗ್ತಿದೆ. ಹೊಟ್ಟೆ ಮುಂದೆ ಬರ್ತಿದೆ.

ಬೊಜ್ಜು ಕರಗಿಸಿಕೊಂಡು ಸ್ಲಿಮ್ ಆಗಲು ಏನೆಲ್ಲ ಕಸರತ್ತು ಮಾಡ್ತೇವೆ. ಜಿಮ್, ವ್ಯಾಯಾಮ, ಮಾರುಕಟ್ಟೆಯಲ್ಲಿ ಸಿಗುವ ಔಷಧಿ ಹೀಗೆ ನಾನಾ ಪ್ರಯೋಗಗಳನ್ನು ಮಾಡ್ತೇವೆ. ಆದ್ರೆ ಬೊಜ್ಜು ಮಾತ್ರ ಕರಗೋದಿಲ್ಲ. ಯಾವುದೇ ವ್ಯಾಯಾಮವಿಲ್ಲದೆ ಆರಾಮಾಗಿ ಹೊಟ್ಟೆ ಕರಗಬೇಕೆಂದ್ರೆ ನಾವು ಹೇಳಿದ ಉಪಾಯವನ್ನು ತಪ್ಪದೆ ಅನುಸರಿಸಿ. ಬೆಳಿಗ್ಗೆ ಹಾಗೂ ರಾತ್ರಿ ಈ ಪಾನೀಯವನ್ನು ಕುಡಿದ್ರೆ ನಿಮ್ಮ ಬೊಜ್ಜು ಕರಗಿ ಹೊಟ್ಟೆ ಹಿಂದೆ ಹೋಗೋದ್ರಲ್ಲಿ ಸಂಶಯವೇ ಇಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪಾನೀಯ ಸೇವನೆ ಮಾಡಿದ್ರೆ ನಾಲ್ಕು ದಿನದಲ್ಲಿ ನಾಲ್ಕು ಕೆ.ಜಿ. ತೂಕ ಕಡಿಮೆಯಾಗುತ್ತದೆ. ಇದ್ರಿಂದ ನಿಮ್ಮ ಹೊಟ್ಟೆ ಮಾತ್ರ ಕರಗೋದಿಲ್ಲ, ಬದಲಾಗಿ ನಿಮ್ಮ ಸೊಂಟದ ಸುತ್ತಳತೆ ಕೂಡ ನಾಲ್ಕು ಇಂಚು ಕಡಿಮೆಯಾಗುತ್ತದೆ.

ಪಾನೀಯ ಮಾಡಲು ಬೇಕಾಗುವ ಪದಾರ್ಥ:

8 ಗ್ಲಾಸ್ ನೀರು

ಸಣ್ಣ ಗಾತ್ರದ ಸೌತೆಕಾಯಿ

ಒಂದು ನಿಂಬೆ ಹಣ್ಣು

ಒಂದು ಟೀ ಚಮಚ ಶುಂಠಿ ಪುಡಿ

10-12 ಪುದೀನಾ ಎಲೆಗಳು

ಪಾನೀಯ ಮಾಡುವ ವಿಧಾನ : ಮೊದಲು ಸೌತೆಕಾಯಿಯನ್ನು ಕತ್ತರಿಸಿಕೊಳ್ಳಿ. ನಂತ್ರ ಪಾತ್ರೆಗೆ ನೀರು, ನಿಂಬೆ ಹಣ್ಣಿನ ರಸ, ಸೌತೆಕಾಯಿ, ಶುಂಠಿ ಪುಡಿ, ಪುದೀನಾ ಎಲೆಗಳನ್ನು ಹಾಕಿ ಮಿಕ್ಸ್ ಮಾಡಿ. ಅದನ್ನು ರಾತ್ರಿ ಪೂರ್ತಿ ಫ್ರಿಜ್ ನಲ್ಲಿ ಹಾಗೆ ಇಡಿ. ಮರುದಿನ ಬೆಳಿಗ್ಗೆ ಉಪಹಾರಕ್ಕೂ ಮುನ್ನ ಒಂದು ಗ್ಲಾಸ್ ನೀರನ್ನು ಕುಡಿಯಿರಿ. ಇದರಿಂದ ನಿಮಗೆ ಸಾಕಷ್ಟು ಉಪಯೋಗವಾಗಲಿದೆ.

ಇದನ್ನು ಸೇವನೆ ಮಾಡಿದ ಅನೇಕ ಮಂದಿ ನಾಲ್ಕು ದಿನದಲ್ಲಿ ನಾಲ್ಕು ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular