ವಾರಕ್ಕೊಮ್ಮೆ ಕುಡಿಯಿರಿ ಈ ಡಿಟಾಕ್ಸ್‌ ವಾಟರ್‌; ಮಾಯವಾಗುತ್ತವೆ ಲಿವರ್-ಕಿಡ್ನಿ ಸಮಸ್ಯೆಗಳು……!

ಇತ್ತೀಚಿನ ದಿನಗಳಲ್ಲಿ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವುದೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಸಕ್ಕರೆ ಕಾಯಿಲೆ, ಕ್ಯಾನ್ಸರ್‌ನಂತಹ ಮಾರಕ ರೋಗಗಳು ಜನರನ್ನು ಕಾಡುತ್ತಿವೆ. ಹಾಗಾಗಿ ಇಂತಹ ಕಾಯಿಲೆಗಳಿಂದ ದೂರವಿರಲು ಲಿವರ್ ಮತ್ತು ಕಿಡ್ನಿಯಂತಹ ಅಂಗಗಳನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಇದಕ್ಕಾಗಿ ವಾರಕ್ಕೊಮ್ಮೆ ಡಿಟಾಕ್ಸ್ ವಾಟರ್‌ ಕುಡಿಯುವುದು ಸೂಕ್ತ.

ದೇಹದ ಎಲ್ಲಾ ಭಾಗಗಳನ್ನು ಸಂಪೂರ್ಣವಾಗಿ ಫಿಟ್ ಆಗಿ ಇರಿಸಿಕೊಳ್ಳಲು ವಾರಕ್ಕೆ 1-2 ಬಾರಿ ಈ ಡಿಟಾಕ್ಸ್ ವಾಟರ್‌ ಕುಡಿಯಿರಿ. ಕೆಲವು ಸಾವಯವ ಪದಾರ್ಥಗಳನ್ನು ಬೆರೆಸಿದ ನೀರು ಇದು. ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ದಿನವಿಡೀ ದೇಹವನ್ನು ಶಕ್ತಿಯುತವಾಗಿರಿಸುತ್ತದೆ.

ಡಿಟಾಕ್ಸ್ ಡ್ರಿಂಕ್‌ ತಯಾರಿಸುವುದು ಹೇಗೆ?

ಈ ಡಿಟಾಕ್ಸ್ ವಾಟರ್‌ಗೆ ತಾಜಾ ಹಣ್ಣುಗಳು, ತರಕಾರಿಗಳು ಅಥವಾ ಗಿಡಮೂಲಿಕೆಗಳನ್ನು ಬೆರೆಸಬಹುದು. ಇದನ್ನು ಫ್ರೂಟ್‌ ಇನ್ಫ್ಯೂಸ್ಡ್ ವಾಟರ್ ಅಥವಾ ಫ್ರೂಟ್ ಸಲಾಡ್ ವಾಟರ್ ಎಂದೂ ಕರೆಯಬಹುದು. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ಚಯಾಪಚಯ ಕೂಡ ವೇಗ ಪಡೆದುಕೊಳ್ಳುತ್ತದೆ.

ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಫಿಟ್ ಆಗಿರಿಸಿಕೊಳ್ಳಲು ಈ  ಡಿಟಾಕ್ಸ್ ನೀರನ್ನು ಬಳಸಿ. ಇದರೊಂದಿಗೆ ಗ್ರೀನ್ ಟೀ ಮತ್ತು ಹಾಗಲಕಾಯಿ ರಸ ಕೂಡ ಪ್ರಯೋಜನಕಾರಿ.

ಡಿಟಾಕ್ಸ್ ವಾಟರ್‌ ಕುಡಿಯುವುದರಿಂದ ಹೈಡ್ರೇಟೆಡ್ ಆಗಿರಬಹುದು. ಯಕೃತ್ತು ಮತ್ತು ಮೂತ್ರಪಿಂಡಗಳ ಕಾರ್ಯ ಕೂಡ ಸುಧಾರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಟಾಕ್ಸ್ ವಾಟರ್‌ ಕುಡಿಯುವ ಟ್ರೆಂಡ್ ಸಹ ಫೇಮಸ್‌ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read