ಕುಡಿದು ಕಾರ್ ಚಾಲನೆ: 15,000 ರೂ. ದಂಡ

ಶಿವಮೊಗ್ಗ: ಕುಡಿದು ಕಾರ್ ಚಾಲನೆ ಮಾಡಿದ ವ್ಯಕ್ತಿಗೆ 15 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಧಾರ್ಮಿಕ, ಪ್ರವಾಸಿ ಕೇಂದ್ರವಾದ ಕುಂದಾದ್ರಿ ಬೆಟ್ಟದ ರಸ್ತೆ ಮಾರ್ಗದಲ್ಲಿ ಮದ್ಯಪಾನ ಮಾಡಿ ಕಾರ್  ಚಲಾಯಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಸನ್ನ ಶೆಟ್ಟಿಗೆ ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಾಧೀಶರು 15,000 ರೂ. ದಂಡ ವಿಧಿಸಿದ್ದಾರೆ.

ಕುಂದಾದ್ರಿ ಬೆಟ್ಟದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ಪ್ರಸನ್ನ ಶೆಟ್ಟಿ ಕಾರ್ ಚಾಲನೆ ಮಾಡುವಾಗ ಮದ್ಯ ಸೇವಿಸಿರುವುದು ತಪಾಸಣಾ ಯಂತ್ರದಲ್ಲಿ ಸಾಬೀತಾಗಿತ್ತು. ಈ ಬಗ್ಗೆ ಆಗುಂಬೆ ಠಾಣೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಆಗುಂಬೆ ಪಿಎಸ್ಐ ರಂಗನಾಥ್ ಅಂತರಗಟ್ಟಿ, ಎಎಸ್ಐ ಉಮೇಶ ನಾಯ್ಕ, ಕಾಣ್ ಸ್ಟೆಬಲ್ ಗಳಾದ ಅನಿಲ್, ಸುನಿಲ್ ಕನ್ನಂಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read