ಉತ್ತಮ ಆರೋಗ್ಯಕ್ಕೆ ಪ್ರತಿ ದಿನ ಕುಡಿಯಿರಿ ಕಿತ್ತಳೆ ಹಣ್ಣಿನ ಜ್ಯೂಸ್

ಕಿತ್ತಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ.

ಇದ್ರಲ್ಲಿ ವಿಟಮಿನ್-ಸಿ ಸೇರಿದಂತೆ ಆಂಟಿಆಕ್ಸಿಡೆಂಟ್ ಗುಣವಿದೆ. ರುಚಿಕರವಾಗಿರುವ ಜೊತೆಗೆ ಕಿತ್ತಳೆ ಹಣ್ಣಿನ ಜ್ಯೂಸ್, ದೇಹಕ್ಕೆ ಬೇಗ ಶಕ್ತಿ ನೀಡುತ್ತದೆ.

ಕಿತ್ತಳೆ ಹಣ್ಣಿನ ಜ್ಯೂಸನ್ನು ಬೆಳಿಗ್ಗೆ ಉಪಹಾರದ ಜೊತೆ ಅಥವಾ ಜಿಮ್ ಮುಗಿದ ನಂತ್ರ ಸೇವನೆ ಮಾಡಬಹುದು. ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದ್ರಿಂದ ಪಾರ್ಶ್ವವಾಯು ಕಾಣಿಸಿಕೊಳ್ಳುವುದಿಲ್ಲ. ಅಧ್ಯಯನವೊಂದರ ಪ್ರಕಾರ, ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವವರಿಗೆ ಮೆದುಳಿನ ಸ್ಟ್ರೋಕ್ ಕಾಣಿಸಿಕೊಳ್ಳುವುದು ಅಪರೂಪ. ಉಳಿದವರಿಗೆ ಹೋಲಿಕೆ ಮಾಡಿದ್ರೆ ಇವ್ರಿಗೆ ಅತಿ ಕಡಿಮೆ ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ.

ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ ಕಾಣಿಸಿಕೊಳ್ಳುತ್ತವೆಯಂತೆ. ಸಂಶೋಧಕರು ತಾಜಾ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಇತ್ತೀಚಿನ ದಿನಗಳಲ್ಲಿ ಹಣ್ಣಿನಲ್ಲಿರುವ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿ ಸೇವನೆ ಮಾಡಿ ಎಂಬ ಎಚ್ಚರಿಕೆಯನ್ನೂ ನೀಡಲಾಗ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read