HomeLatest Newsʼತುಳಸಿʼ ಕಷಾಯ ಸೇವಿಸಿ ಫಿಟ್ ಆಗಿರಿ

ʼತುಳಸಿʼ ಕಷಾಯ ಸೇವಿಸಿ ಫಿಟ್ ಆಗಿರಿ

ಫಿಟ್ ಆಗಿರಲು, ದೇಹ ತೂಕ ಕಡಿಮೆ ಮಾಡಿಕೊಳ್ಳಲು ಹಲವು ವಿಧದ ಕಷಾಯಗಳನ್ನು ಮಾಡಿ ಕುಡಿದು ಸೋತಿದ್ದೀರಾ, ಹಾಗಿದ್ದರೆ ಈ ಬಾರಿ ಅತ್ಯುತ್ತಮ ಫಲಿತಾಂಶ ಕೊಡುವ ತುಳಸಿ ಎಲೆಗಳನ್ನು ಬಳಸಿ, ನಿಮ್ಮ ದೇಹ ತೂಕ ಕಡಿಮೆ ಮಾಡಿಕೊಳ್ಳಿ.

ತುಳಸಿ ಎಲೆಗಳನ್ನು ಕೊಯ್ದು ಸ್ವಚ್ಛವಾಗಿ ತೊಳೆದು ನೀರಿನಲ್ಲಿ ಹಾಕಿ ಕುದಿಸಿ. ಎರಡು ಲೋಟ ನೀರು ಒಂದು ಲೋಟಕ್ಕೆ ಇಳಿಯುವಷ್ಟು ಹೊತ್ತು ಕುದಿಸಿ. ಸೋಸಿ ಕುಡಿಯಿರಿ.

ನಿತ್ಯ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದು ಒಳ್ಳೆಯದು. ವಿಪರೀತ ಕಹಿ ಎನಿಸಿದರೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಇದು ಕೂಡಾ ದೇಹ ತೂಕ ಇಳಿಕೆಗೆ ಸಹಕಾರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುಳಸಿಯನ್ನು ಜಜ್ಜಿ ರಸ ಹಿಂಡಿ ಅದಕ್ಕೆ ನಿಂಬೆರಸ, ಚಿಟಿಕೆ ಕಾಳು ಮೆಣಸಿನ ಪುಡಿ ಬೆರೆಸಿ ಕುಡಿದರೂ ಬೊಜ್ಜು ಕರಗುತ್ತದೆ ಮಾತ್ರವಲ್ಲ ಕೆಮ್ಮು ದಮ್ಮುವಿನ ಲಕ್ಷಣಗಳು ದೂರವಾಗುತ್ತದೆ. ಶೀತ ಕೆಮ್ಮುವಿಗೂ ಇದು ಹೇಳಿ ಮಾಡಿಸಿದ ಮದ್ದು.

For Latest News Updates, Join Our Whatsapp Community🚩
RELATED ARTICLES

Most Popular