HomeKarnatakaBIG NEWS: ಇನ್ಮುಂದೆ 'ಸಿಎಂ' ವಿಚಾರವಾಗಿ ಯಾರೂ ನನ್ನನ್ನು ಪ್ರಶ್ನೆ ಕೇಳಬೇಡಿ; ಗೃಹ ಸಚಿವ ಪರಮೇಶ್ವರ್...

BIG NEWS: ಇನ್ಮುಂದೆ ‘ಸಿಎಂ’ ವಿಚಾರವಾಗಿ ಯಾರೂ ನನ್ನನ್ನು ಪ್ರಶ್ನೆ ಕೇಳಬೇಡಿ; ಗೃಹ ಸಚಿವ ಪರಮೇಶ್ವರ್ ತಾಕೀತು

ಬೆಂಗಳೂರು: ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಕಾಂಗ್ರೆಸ್ ನಾಯಕರು ತೆರೆ ಎಳೆಯಲು ಮುಂದಾಗಿದ್ದಾರೆ. ಸಿಎಂ ಹುದ್ದೆ ವಿಚಾರವಾಗಿ ಯಾರೂ ನನ್ನನ್ನು ಕೇಳುವಂತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಾಕೀತು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಿಎಂ ವಿಚಾರವಾಗಿ ಇನ್ಮುಂದೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಯಾರೂ ಈ ವಿಚಾರವಾಗಿ ನನ್ನನ್ನು ಪ್ರಶ್ನೆ ಕೇಳಬೇಡಿ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಸರ್ಕಾರ ಚನ್ನಾಗಿ ನಡೆಯುತ್ತಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಚಾಚು ತಪ್ಪದೇ ಈಡೇರಿಸುತ್ತಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದು ಜನ ಸಂತೋಷವಾಗಿದ್ದಾರೆ. ಬೇರೆಯವರ ಹೇಳಿಕೆಗಳು ಜಾಸ್ತಿ ಎಫೆಕ್ಟ್ ಆಗಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular