HomeKarnatakaನೂತನ ಸಚಿವರಿಗೆ ಸರ್ಕಾರಿ ಕಾರು, ನಿವಾಸ ಹಂಚಿಕೆ: 6 ಸಚಿವರಿಗೆ ಫ್ಯಾನ್ಸಿ ನಂಬರ್ ಕ್ರೇಜ್

ನೂತನ ಸಚಿವರಿಗೆ ಸರ್ಕಾರಿ ಕಾರು, ನಿವಾಸ ಹಂಚಿಕೆ: 6 ಸಚಿವರಿಗೆ ಫ್ಯಾನ್ಸಿ ನಂಬರ್ ಕ್ರೇಜ್

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರುಗಳಿಗೆ ಅಧಿಕೃತ ಸರ್ಕಾರಿ ನಿವಾಸ ಹಾಗೂ ನೂತನವಾಗಿ ಕಾರ್ಯನಿರ್ವಹಿಸುತ್ತಿರುವ 19ಸಚಿವರುಗಳಿಗೆ ಸರ್ಕಾರಿ ವಾಹನಗಳನ್ನು ನಿಯೋಜಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.

ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸೇರಿದಂತೆ ಸಂಪುಟದ ಪ್ರಮುಖ 10 ನಾಯಕರಿಗೆ ರಾಜಧಾನಿಯ ಪ್ರತಿಷ್ಠಿತ ಪ್ರದೇಶಗಳಾದ ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆಗಳಲ್ಲಿ ಅಧಿಕೃತ ಬಂಗಲೆಗಳನ್ನು ಕಾಯ್ದಿರಿಸಲಾಗಿದೆ. ಇತ್ತ, ನೂತನವಾಗಿ ಸರ್ಕಾರಿ ಕಾರು ಪಡೆದ ಸಚಿವರ ಪೈಕಿ ಹಲವರು ತಮ್ಮಿಷ್ಟದ ಫ್ಯಾನ್ಸಿ ಸಂಖ್ಯೆಯ ವಾಹನಗಳನ್ನೇ ಆಯ್ದುಕೊಂಡಿರುವುದು ವಿಶೇಷ ಗಮನ ಸೆಳೆದಿದೆ.

ಸಚಿವರಿಗೆ ಹಂಚಿಕೆಯಾದ ಅಧಿಕೃತ ಸರ್ಕಾರಿ ನಿವಾಸಗಳು:

ಡಾ. ಜಿ. ಪರಮೇಶ್ವರ (ಉಪ ಮುಖ್ಯಮಂತ್ರಿ): ಸದಾಶಿವನಗರ, RMV 2ನೇ ಹಂತಎನ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆಲುವರಾಯಸ್ವಾಮಿ: ನಂ. 3, ಕುಮಾರ ಕೃಪಾ ದಕ್ಷಿಣಿಬಿ.ಝೆಡ್.

ಜಮೀರ್ ಅಹಮದ್ ಖಾನ್: ನಂ. 30, ಸ್ಯಾಂಕಿ ರಸ್ತೆ

ಸಂತೋಷ್ ಲಾಡ್: ನಂ. 3, ಸದಾ ಸಚಿವರ ನಿವಾಸ, ಸ್ಯಾಂಕಿ ರಸ್ತೆ

ಬೈರತಿ ಸುರೇಶ್: ನಂ. 2, ಕೇಶವ್ ರಸ್ತೆ

ಶಿವರಾಜ್ ಎಸ್. ತಂಗಡಗಿ: ನಂ. ಬಿ-2, ಜಯಮಹಲ್ ಬಡಾವಣೆ

ಲಕ್ಷ್ಮಣ ಸವದಿ: ನಂ. 3, ಜಯಮಹಲ್ ಬಡಾವಣೆ

ಪಿ.ಎಂ. ನರೇಂದ್ರ ಸ್ವಾಮಿ: ನಂ. 5, ಜಯಮಹಲ್ ಬಡಾವಣೆಕೆ.

ಎನ್. ಶಿವಲಿಂಗೇಗೌಡ: ನಂ. 1, ಜಯಮಹಲ್ ಬಡಾವಣೆಕೆ.

ಎಸ್. ಬಸವಂತಪ್ಪ: ನಂ. ಬಿ-6, ಜಯಮಹಲ್ ಬಡಾವಣೆ

ಫ್ಯಾನ್ಸಿ ನಂಬರ್ ಕಾರ್‌ಗಳತ್ತ ಸಚಿವರ ಕ್ರೇಜ್:ಸಚಿವರು ಮತ್ತು ಹಂಚಿಕೆ ಮಾಡಲಾದ ವಾಹನಗಳ ಸಂಖ್ಯೆ

ಅಜಯ್ ಸಿಂಗ್ — ಕೆಎ-02-ಜಿಎ-0055

ಎಚ್.ಸಿ. ಬಾಲಕೃಷ್ಣ — ಕೆಎ-02-ಜಿಎ-0018

ಕೆ.ಎಸ್. ಬಸವಂತಪ್ಪ — ಕೆಎ-01-ಜಿ-7170

ಬಸವರಾಜ್ ರಾಯರೆಡ್ಡಿ — ಕೆಎ-01-ಜಿಎ-8899

ಎನ್. ಚೆಲುವರಾಯಸ್ವಾಮಿ — ಕೆಎ-05-ಜಿ-6555

ಲಕ್ಷ್ಮಣ್ ಸಂಗಪ್ಪ ಸವದಿ — ಕೆಎ-02-ಜಿಜಿ-0045

ಮಧು ಬಂಗಾರಪ್ಪ — ಕೆಎ-02-ಜಿಎ-2021

ಎಸ್.ಎಸ್. ಮಲ್ಲಿಕಾರ್ಜುನ್ — ಕೆಎ-02-ಜಿಜಿ-0555

ಬಿ. ನಾಗೇಂದ್ರ — ಕೆಎ-09-ಜಿಎ-4599

ಬಿ.ಎಂ. ನರೇಂದ್ರಸ್ವಾಮಿ — ಕೆಎ-01-ಜಿಎ-0189

ಸಿ. ಪುಟ್ಟರಂಗ ಶೆಟ್ಟಿ — ಕೆಎ-45-ಜಿಎ-4545

ಟಿ. ರಘುಮೂರ್ತಿ — ಕೆಎ-59-ಜಿ-2799

ರಿಜ್ವಾನ್ ಅರ್ಷದ್ — ಕೆಎ-02-ಜಿಜಿ-0786

ರುದ್ರಪ್ಪ ಮಾನಪ್ಪ ಲಮಾಣಿ — ಕೆಎ-01-ಜಿಎ-7070

ಸಂತೋಷ್ ಎಸ್. ಲಾಡ್ — ಕೆಎ-02-ಜಿ-9990

ಕೆ. ಎಂ. ಶಿವಲಿಂಗೇಗೌಡ — ಕೆಎ-02-ಜಿಜಿ-0111

ತಂಗಡಗಿ ಶಿವರಾಜ್ ಸಂಗಪ್ಪ — ಕೆಎ-03-ಜಿಜಿ-5555

ವಿಜಯಾನಂದ ಕಾಶಪ್ಪನವರ್ — ಕೆಎ-01-ಜಿ-7704

ಬಿ. ಝಮೀರ್ ಅಹಮದ್ ಖಾನ್ — ಕೆಎ-03-ಜಿಜಿ-6666

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular