HomeLatest NewsBREAKING: ವರದಕ್ಷಿಣೆ ಕಿರುಕುಳ: ಮನನೊಂದ ಮಹಿಳೆ ಆತ್ಮಹತ್ಯೆ

BREAKING: ವರದಕ್ಷಿಣೆ ಕಿರುಕುಳ: ಮನನೊಂದ ಮಹಿಳೆ ಆತ್ಮಹತ್ಯೆ

ಬೆಂಗಳೂರು: ಆಧುನಿಕವಾಗಿ ಪ್ರಪಂಚ ಎಷ್ಟೇ ಮುಂದುವರೆದಿದೆ ಎಂದರೂ, ಮಹಿಳೆ ಸ್ವಾವಲಂಭಿಯಾಗಿ ದುಡಿಯುತ್ತಿದ್ದರೂ, ವರದಕ್ಷಿಣೆ ಪಿಡುಗು ಮಾತ್ರ ಸಮಾಜದಿಂದ ಮಾಯವಾಗಿಲ್ಲ. ಒಂದಿಲ್ಲ ಒಂದುಕಾರಣಕ್ಕೆ ಪತಿ ಮನೆಯವರ ಚುಚ್ಚು ಮಾತು, ಧನದಾಹ, ದೌರ್ಜನ್ಯ-ದಬ್ಬಾಳಿಕೆ ಮಹಿಳೆಯರ ಮೇಲೆ ಮುಂದುವರೆದಿದೆ. ಇಂತದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪತಿ ಹಾಗೂ ಮನೆಯವರ ವರದಕ್ಷಿಣೆ ಕಿರುಕುಳ, ಹಿಂಸೆಗೆ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳುರಿನ ಯಡಿಯೂರಿನಲ್ಲಿ ನಡೆದಿದೆ.

ಕೀರ್ತಿ ಮೃತ ಮಹಿಳೆ. ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯಲ್ಲಿ ಕೀರ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪತಿ ಗುರು ಪ್ರಸಾದ್ ಹಾಗೂ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಕೀರ್ತಿ ಹಾಗೂ ಗುರುಪ್ರಸಾದ್ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. ವರದಕ್ಷಿಣೆ ಹಣಕ್ಕಾಗಿ ಪತಿ ಗುರು ಪ್ರಸಾದ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪತಿಯ ಹಿಂಸೆಗೆ ಬೇಸತ್ತು ಕೀರ್ತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಬನಶಂಕರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular