ಬೆಂಗಳೂರು: ಮಗುವಿನ ಎದುರಲ್ಲೇ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರದಲ್ಲಿ ನಡೆದಿದೆ.
ದೊಡ್ದಬಳಾಪುರದ ಕೆಸ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ಮಗುವಿನ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ಯಾಮಲಾ (26) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.
ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ ನಿರಂತರ ಕಿರುಕುಳ ನೀಡುತ್ತಿದ್ದರಂತೆ ಇದರಿಂದ ತೀವ್ರವಾಗಿ ಮನೆ ನೊಂದಿದ್ದ ಶ್ಯಾಮಲಾ, ಬೇರೆ ಮನೆ ಮಾಡುವ ವಿಚಾರ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಬೇರೆ ಮನೆ ವಿಚಾರ ಬರುತ್ತಿದ್ದಂತೆ ಗಲಾಟೆ ತಾರಕಕ್ಕೇರಿದ್ದು, ಗಲಾಟೆ ಬಳಿಕ ಮಗುವಿನೊಂದಿಗೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಶ್ಯಾಮಲಾ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗು ಜೋರಾಗಿ ಅಳುತ್ತಿರುವುದನ್ನು ಕೇಳಿ ಕುಟುಖ್ಬದವರು ರೂಮಿಗೆ ಬಂದು ನೋಡಿದಾಗ ಶ್ಯಾಮಲಾ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು.
ವರದಕ್ಷಿಣೆ ಕಿರುಕುಳಕ್ಕೆ ಮಗಳು ಸಾವನ್ನಪ್ಪಿದ್ದಾಗಿ ಶ್ಯಾಮಲಾ ಪೋಷಕರು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.