HomeLatest Newsಫಾಸ್ಟ್ಯಾಗ್ ಇಲ್ಲದೆ ನಗದು ರೂಪದಲ್ಲಿ ಟೋಲ್ ಪಾವತಿಗೆ ದುಪ್ಪಟ್ಟು ಶುಲ್ಕ...!

ಫಾಸ್ಟ್ಯಾಗ್ ಇಲ್ಲದೆ ನಗದು ರೂಪದಲ್ಲಿ ಟೋಲ್ ಪಾವತಿಗೆ ದುಪ್ಪಟ್ಟು ಶುಲ್ಕ…!

ನವದೆಹಲಿ: ಕೇಂದ್ರ ಸರ್ಕಾರವು ಫಾಸ್ಟ್ಯಾಗ್ ಇಲ್ಲದವರಿಗೆ ಶುಭ ಸುದ್ದಿ ನೀಡಿದೆ. ನವೆಂಬರ್ 15ರಿಂದ ಫಾಸ್ಟ್ಯಾಗ್  ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಹಣ ಪಾವತಿಸಬೇಕಿಲ್ಲ.

ಆದರೆ ಯುಪಿಐ ಪಾವತಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ನಗದು ರೂಪದಲ್ಲಿ ಟೋಲ್ ಶುಲ್ಕ ಪಾವತಿಸುವವರು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ದರಗಳು ಮತ್ತು ಸಂಗ್ರಹ ನಿರ್ಣಯ ನಿಯಮಗಳು 2008 ತಿದ್ದುಪಡಿ ಮಾಡಿದ್ದು, ಫಾಸ್ಟ್ಯಾಗ್ ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನ ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಲಾಗಿದೆ. ಡಿಜಿಟಲ್ ವಹಿವಾಟು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular