HomeAutoರಾಜ್ಯ ರಾಜಧಾನಿಯ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು....!

ರಾಜ್ಯ ರಾಜಧಾನಿಯ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು….!

ಬೆಂಗಳೂರು ಡಬಲ್ ಡೆಕ್ಕರ್ ಬಸ್‌ಗಳಿಗೆ ಬಿಎಂಟಿಸಿ ಟೆಂಡರ್, ಯಾವ ಮಾರ್ಗ, ಕಾರ್ಯಾಚರಣೆ ಯಾವಾಗ ಗೊತ್ತಾ? | BMTC tender for double decker buses to Bengaluru, Do you know the when will the operation be ...

1979 – 80 ರ ದಶಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು ಆ ಬಳಿಕ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಡಬಲ್ ಡೆಕ್ಕರ್ ಬಸ್ಸುಗಳನ್ನು ರಸ್ತೆಗಿಳಿಸಲು ಬಿಬಿಎಂಪಿ ಸಜ್ಜಾಗಿದೆ.

ಎರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಲಾಗಿದ್ದು, ಈಗಿನ ಪೀಳಿಗೆಗೆ ಡಬಲ್ ಡೆಕ್ಕರ್ ಬಸ್ಸುಗಳು ಮತ್ತೆ ಆಕರ್ಷಣೆಯ ಕೇಂದ್ರ ಬಿಂದುವಾಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ವರ್ಷದೊಳಗೆ 10 ಡಬಲ್ ಡೆಕ್ಕರ್ ಬಸ್ಸುಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರ ಕುರಿತು ಆಸಕ್ತಿ ಹೊಂದಿದ್ದು, ಬಿಬಿಎಂಪಿಗೆ ಈ ಬಸ್ಸುಗಳು ಬಂದ ಬಳಿಕ ಅವುಗಳ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಮೈಸೂರಿನಂತಹ ನಗರಗಳಲ್ಲಿ ಡಬಲ್ ಡೆಕ್ಕರ್ ಬಸ್ಸುಗಳನ್ನು ರಸ್ತೆಗಿಳಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular