HomeLatest Newsಅನ್ನ ಉಳಿದಿದೆಯಾ ಚಿಂತೆ ಬೇಡ ಮಾಡಿ ನೋಡಿ ರುಚಿಕರ 'ತಾಳಿಪಟ್ಟು'

ಅನ್ನ ಉಳಿದಿದೆಯಾ ಚಿಂತೆ ಬೇಡ ಮಾಡಿ ನೋಡಿ ರುಚಿಕರ ‘ತಾಳಿಪಟ್ಟು’

ಅಕ್ಕಿ ಬೆಲೆ ಗಗನಕ್ಕೆ ಏರಿದೆ. ಹಾಗಾಗಿ ಅನ್ನ ವೇಸ್ಟ್ ಮಾಡೋದು ಅಂದ್ರೆ ಯಾರಿಗೆ ಆದ್ರೂ ಬೇಜಾರ್ ಆಗುತ್ತೆ. ಹೋಗ್ಲಿ ರಾತ್ರಿ ಅನ್ನನಾ ಬೆಳಗ್ಗೆ ತಿನ್ನೋಣ ಅಂದ್ರೆ, ಅದೂ ಸೇರಲ್ಲ. ಉಳಿದ ಅನ್ನ ಮತ್ತೇನು ಮಾಡಬೇಕು ಅನ್ನೋದೆ ತಲೆನೋವು. ಹಾಗಾದರೆ ರುಚಿ ರುಚಿಯಾದ ತಾಳಿಪಟ್ಟು ತಯಾರಿಸಿ ನೋಡಿ.

ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ಅಕ್ಕಿ ಹಿಟ್ಟು – 1/2 ಕಪ್
ಮೈದಾ ಹಿಟ್ಟು – 1/4 ಕಪ್
ಹೆಚ್ಚಿದ ಈರುಳ್ಳಿ – 2
ಹೆಚ್ಚಿದ ಟೊಮೆಟೋ – 1
ಹೆಚ್ಚಿದ ಕರಿಬೇವು – ಸ್ವಲ್ಪ
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಹೆಚ್ಚಿದ ಹಸಿಮೆಣಸು – 2
ತುರಿದ ಕ್ಯಾರೆಟ್ – 1
ತುರಿದ ಶುಂಠಿ – 1 ಇಂಚು
ಉಪ್ಪು – ರುಚಿಗೆ
ತುಪ್ಪ – ಸ್ವಲ್ಪ

ಮಾಡುವ ವಿಧಾನ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಸ್ಮ್ಯಾಶ್ ಮಾಡಿರುವ ಅನ್ನ, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಈರುಳ್ಳಿ, ಹೆಚ್ಚಿದ ಟೊಮೆಟೋ, ಕ್ಯಾರಟ್, ಉಪ್ಪು, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನೂ ಹಾಕಿ ಅಗತ್ಯವಿದ್ದರೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಮಧ್ಯಮ ಗಾತ್ರದ ಉಂಡೆಯನ್ನಾಗಿ ಮಾಡಿ ಅದನ್ನು ರೊಟ್ಟಿಯ ಆಕಾರಕ್ಕೆ ತಟ್ಟಬೇಕು. ಕಾದ ಕಾವಲಿಯ ಮೇಲೆ ಹಾಕಿ ಒಂದು ಚಮಚ ತುಪ್ಪವನ್ನು ಸವರಿ ಬೇಯಿಸಿದರೆ ತಾಳಿಪಟ್ಟು ರೆಡಿ.

ಹೀಗೆ ಇದಕ್ಕೆ ಸೊಪ್ಪು ಅಥವಾ ಇನ್ನು ಯಾವುದೇ ತರಕಾರಿಗಳನ್ನು ಬಳಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular