ಯಾರ ಜೊತೆಗೂ ಹಂಚಿಕೊಳ್ಳಬೇಡಿ ನಿಮ್ಮ ಈ ವಸ್ತು…!

ಹಂಚಿ ತಿನ್ನಬೇಕು ಎಂದು ಹೇಳುತ್ತಾರೆ. ಊಟವನ್ನು ಹಂಚಿ ತಿನ್ನಿ. ಆದರೆ ಈ ವಸ್ತುಗಳನ್ನು ಮಾತ್ರ ಬೇರೆಯವರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಈ ವಸ್ತುಗಳನ್ನು ಹಂಚಿಕೊಳ್ಳುವುದರಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗಬಹುದು.

ಆದ್ದರಿಂದ ಈ ವಸ್ತುಗಳನ್ನು ನಿಮ್ಮ ಸ್ನೇಹಿತರು ಅಥವಾ ಮನೆಯವರು ಕೇಳಿದರೆ ಇಲ್ಲ ಎಂದು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಯಾವುದು ಆ ವಸ್ತುಗಳು.

ಇಯರ್‌ ಫೋನ್‌

ಒಬ್ಬರು ಕಿವಿಗೆ ಹಾಕಿದ್ದನ್ನು ಮತ್ತೊಬ್ಬರು ಬಳಸುವುದು ಒಳ್ಳೆಯದಲ್ಲ. ಅವರಿಗೆ ಏನಾದರೂ ಸೋಂಕು ಇದ್ದರೆ ಹರಡುವ ಸಾಧ್ಯತೆ ಇದೆ.

ಲಿಪ್‌ಸ್ಟಿಕ್‌, ಲಿಪ್ ಬಾಮ್

ಕೆಲವೊಂದು ಸೋಂಕು ಎಂಜಲು ಮೂಲಕ ಹರಡುತ್ತದೆ. ಹೀಗಾಗಿ ಒಬ್ಬರು ತುಟಿಗೆ ಬಳಸಿದ್ದನ್ನು ಮತ್ತೊಬ್ಬರು ಬಳಸಬಾರದು.

ಬಾಚಣಿಕೆ

ತಲೆಹೊಟ್ಟು ಮತ್ತಿತರ ಸಮಸ್ಯೆಗಳು ಬಾಚಣಿಕೆ ಮೂಲಕ ಹರಡುತ್ತದೆ.

ಟವಲ್‌

ಕೆಲವೊಂದು ಸೋಂಕು ಒಬ್ಬರ ಬೆವರು ಮತ್ತೊಬ್ಬರಿಗೆ ತಾಗಿದರೆ ಬರುತ್ತದೆ. ಆದ್ದರಿಂದ ಟವಲ್‌ ಅನ್ನು ಯಾರಿಗೂ ನೀಡಬೇಡಿ. ಒಂದು ವೇಳೆ ನೀಡಿದರೆ ಚೆನ್ನಾಗಿ ವಾಶ್‌ ಮಾಡಿದ ಬಳಿಕ ಬಳಸಿ.

ಸೋಪು ಹಾಗೂ ಸ್ಕ್ರಬ್ಬರ್

ಒಂದೇ ಸೋಪು ಹಾಗೂ ಸ್ಕ್ರಬ್ಬರ್‌ ಅನ್ನು ಮನೆ ಮಂದಿಯೆಲ್ಲಾ ಬಳಸಿದರೆ ಒಬ್ಬರಿಗೆ ಇರುವ ತ್ವಚೆ ಸಮಸ್ಯೆ ಮತ್ತೊಬ್ಬರಿಗೆ ಹರಡುವುದರಲ್ಲಿ ಸಂದೇಹವಿಲ್ಲ.

ಕಾಜಲ್‌

ಕಣ್ಣಿನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಕಾಜಲ್‌ ಮೂಲಕ ಕೂಡ ಹರಡುತ್ತದೆ. ಆದ್ದರಿಂದ ಇಂಥ ಮೇಕಪ್ ವಸ್ತುಗಳನ್ನು ಮತ್ತೊಬ್ಬರ ಜೊತೆ ಶೇರ್‌ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read