ಮನೆಯಲ್ಲಿ ಕತ್ತರಿ ಬಳಸುವಾಗ ಮಾಡಬೇಡಿ ಈ ತಪ್ಪು; ಕಾಡಬಹುದು ವಾಸ್ತು ದೋಷದ ತೊಂದರೆ..…!

ಮನೆಯಲ್ಲಿ ಅಗತ್ಯ ವಸ್ತುಗಳನ್ನು ಯಾವ ರೀತಿ ಇಡಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ನಿಯಮಗಳಿವೆ. ಅವುಗಳನ್ನು ಪಾಲಿಸದೇ ಇದ್ದಲ್ಲಿ  ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ. ವಾಸ್ತು ದೋಷದಿಂದ ಮನೆಯ ಸದಸ್ಯರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿ ಮನೆಯಲ್ಲೂ ಕತ್ತರಿ ಅತ್ಯಗತ್ಯವಾದ ವಸ್ತು. ಮನೆಯಲ್ಲಿ ಕತ್ತರಿ ಇಡಲು ಕೂಡ ವಾಸ್ತು ನಿಯಮಗಳಿವೆ.

ಕತ್ತರಿಗಳನ್ನು ಮರೆಮಾಡಬೇಕು

ವಾಸ್ತು ಶಾಸ್ತ್ರದ ಪ್ರಕಾರ ಕತ್ತರಿಯನ್ನು ಬಚ್ಚಿಡಬೇಕು ಅಥವಾ ಯಾರಿಗೂ ಕಾಣದಂತೆ ಇಡಬೇಕು. ಕತ್ತರಿ ತೀಕ್ಷ್ಣವಾದ ವಸ್ತುವಾಗಿದ್ದು, ಅದನ್ನು ತೆರೆದ ಸ್ಥಳದಲ್ಲಿ ಇಡುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ. ತೆರೆದ ಸ್ಥಳದಲ್ಲಿ ಕತ್ತರಿ ಇರಿಸಿದರೆ ಮನೆಯಲ್ಲಿ ತೊಂದರೆ, ಜಗಳಗಳು ಕಾಣಿಸಿಕೊಳ್ಳುತ್ತವೆ.

ಕತ್ತರಿ ಉಡುಗೊರೆಯಾಗಿ ನೀಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಕತ್ತರಿಯನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು. ಇದರಿಂದ ಸಂಬಂಧಗಳು ಕೆಡುತ್ತವೆ ಮತ್ತು ಜಗಳಗಳು ಹೆಚ್ಚಾಗುತ್ತವೆ.

ಹರಿತವಾದ ಕತ್ತರಿಗಳನ್ನೇ ಇಡಬೇಕು

ವಾಸ್ತು ಶಾಸ್ತ್ರದ ಪ್ರಕಾರ ಹರಿತವಿಲ್ಲ ಕತ್ತರಿಗಳನ್ನು ಮನೆಯಲ್ಲಿ ಇಡಬಾರದು. ಕತ್ತರಿ ಅಂಚು ಮೊಂಡಾಗಿದ್ದರೆ ತಕ್ಷಣ ಸರಿಪಡಿಸಬೇಕು, ಇಲ್ಲದಿದ್ದರೆ ವಾಸ್ತು ದೋಷಗಳು ಉಂಟಾಗಬಹುದು.

ಖಾಲಿ ಕತ್ತರಿ ಬಳಸಬೇಡಿ

ಖಾಲಿ ಕತ್ತರಿ ಬಳಸಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಕತ್ತರಿಗಳನ್ನು ಅನಗತ್ಯವಾಗಿ ಬಳಸಬಾರದು. ಇದು ಮನೆಯಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ.

ಕತ್ತರಿ ಎಲ್ಲಿ ಇಡಬಾರದು?

ವಾಸ್ತು ಪ್ರಕಾರ ಮನೆಯ ಮಲಗುವ ಕೋಣೆ ಮತ್ತು ಪೂಜಾ ಕೋಣೆಯಲ್ಲಿ ಕತ್ತರಿ ಇಡಬಾರದು. ಇದು ನಕಾರಾತ್ಮಕತೆಯನ್ನು ತರುತ್ತದೆ. ದೇವರ ಮನೆಯಲ್ಲಿ ಕತ್ತರಿ ಇಟ್ಟರೆ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ. ಶನಿವಾರದಂದು ಅಪ್ಪಿತಪ್ಪಿಯೂ ಕತ್ತರಿ ಖರೀದಿಸಬಾರದು. ಶನಿವಾರದಂದು ಕತ್ತರಿ ಖರೀದಿಸುವುದರಿಂದ ಶನಿ ದೋಷ ಉಂಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read