HomeEntertainmentಸುದೀಪ್ ನಟ ಆದ ಮಾತ್ರಕ್ಕೆ ಅವರ ತಲೆ ಮೇಲೆ ಕೊಂಬು ಇರುತ್ತಾ? ಡಾಗ್ ಸತೀಶ್ ಕಿಡಿ

ಸುದೀಪ್ ನಟ ಆದ ಮಾತ್ರಕ್ಕೆ ಅವರ ತಲೆ ಮೇಲೆ ಕೊಂಬು ಇರುತ್ತಾ? ಡಾಗ್ ಸತೀಶ್ ಕಿಡಿ

ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಡಾಗ್ ಸತೀಶ್ ಶೌಚಾಲಯದಲ್ಲಿ ಇರುವಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ದಾದಾ ಯಾರ್ ಗೊತ್ತಾ..’ ಹಾಡನ್ನು ಬಳಸಿದ್ದು, ಇದಕ್ಕೆ ರಜತ್, ವಿನಯ್ ಗೌಡ ಮೊದಲಾದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಈಗ ವಿವಾಅದಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಕಾಲ ಕಷ್ಟಪಟ್ಟು ಕಿಚ್ಚ ಸುದೀಪ್ ಮೇಲಕ್ಕೆ ಬಂದಿದ್ದಾರೆ. ಅಂಥವರ ಹಾಡನ್ನು ಈ ರೀತಿ ಬಳಕೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಡಾಗ್ ಸತೀಶ್ ಅವರು ಪ್ರತ್ರಿಕ್ರಿಯೆ ನೀಡಿದ್ದಾರೆ.

ಸುದೀಪ್ ಸರ್ ಬಹಳ ಕಷ್ಟಪಟ್ಟು ಹೆಸರು ಮಾಡಿದ್ದಾರೆ ಅಂತ ಹೇಳುತ್ತಿದ್ದೀರಿ. ಆದರೆ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ? ಗೂಗಲ್​ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವಂತಹ ಹಂತಕ್ಕೆ ಆಗಿದ್ದಾರಾ? ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ನಾಯಿ ಪೀಲ್ಡ್​​ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಅಂತ ಬರುತ್ತೇನೆ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್​ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ? ಎಂದು ಡಾಗ್ ಸತೀಶ್ ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುದೀಪ್ ಅವರು ಕಷ್ಟಪಟ್ಟು ಅವರ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನಂಬರ್ 1 ಆಗಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೇನೆ. ನಾನು ಕೂಡ ಕಷ್ಟಪಟ್ಟಿದ್ದೇನೆ. ನನ್ನ ತಲೆ ಮೇಲೆ ಎರಡು ಕೊಂಬು ಇದೆ ಅಂತ ನಾನು ಯಾವತ್ತೂ ಮಾತನಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದಾದಾ ಯಾರ್ ಗೊತ್ತಾ ಹಾಡನ್ನು ನಾನು ಬಳಸಿದ್ದು ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ರಜತ್, ವಿನಯ್ ಮತ್ತು ಧನರಾಜ್ ಪ್ರಚೋದನೆ ಮಾಡಿದ್ದರಿಂದಲೇ ಇಷ್ಟೆಲ್ಲ ಆಗಿದ್ದು. ಎಲ್ಲ ಕಡೆ ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಹಾಕಿದ್ದು ಅವರೇ. ಅವರು ಸುಮ್ಮನೇ ಇದ್ದಿದ್ದರೆ ಇಷ್ಟೊಂದು ಸುದ್ದಿ ಆಗುತ್ತಿತ್ತಾ? ನಾನು ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ.

ಅವರು ನನ್ನ ಮೇಲೆ ದೂರು ಕೊಡಲು ಚೆನ್ನಮ್ಮನ ಕೆರೆಗೆ ಹೋಗಿದ್ದಾರೆ. ನನ್ನ ವಿಡಿಯೋದಲ್ಲಿ ತಪ್ಪು ಇಲ್ಲದ ಕಾರಣ ಚೆನ್ನಮ್ಮನ ಕೆರೆ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಬನಶಂಕರಿ ಠಾಣೆಯಲ್ಲೂ ಅವರಿಗೆ ಬೈಯ್ದು ಕಳಿಸಿದ್ದಾರೆ. ಅವರು ದೂರು ಕೊಡದೇ ಸುಳ್ಳು ಹೇಳುತ್ತಿದ್ದಾರೆ. ಅದು ಅಪರಾಧ. ನನ್ನ ವಿಡಿಯೋಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ, ಬೆದರಿಕೆ ಹಾಕಿದ್ದಾರೆ. ಅದು ಸಮಾಜಕ್ಕೆ ಏನು ಸಂದೇಶ ಕೊಡುತ್ತದೆ?’ ಎಂದು ಡಾಗ್ ಸತೀಶ್ ಗರಂ ಆಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular