ಅಳಿಲು ಬೇಟೆಯಾಡಲು ಹೋಗಿ ಮರ ಏರಿದ ನಾಯಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಅಳಿಲುಗಳು ಮತ್ತು ಸಣ್ಣ ಪ್ರಾಣಿಗಳನ್ನು ಬೆನ್ನಟ್ಟುವುದು ಅನೇಕ ನಾಯಿಗಳಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ಚಟುವಟಿಕೆಯಾಗಿದೆ. ಆದರೆ, ಕಳೆದ ವಾರ ಅಳಿಲುಗಳ ಬೆನ್ನಟ್ಟಿದ ನಂತರ ನಾಯಿಯೊಂದು ಮರದ ಮೇಲೆ ಸಿಲುಕಿಕೊಂಡಾಗ ನಾಯಿಯನ್ನು ಕೆಳಗಿಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಬೇಕಾದ ಘಟನೆಯು ಅಮೆರಿಕದ ಇಡಾಹೊದಲ್ಲಿ ನಡೆದಿದ್ದು, ಇದರ ಫೋಟೋಗಳು ವೈರಲ್​ ಆಗಿವೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಕಾಲ್ಡ್‌ವೆಲ್ ಅಗ್ನಿಶಾಮಕ ಇಲಾಖೆಯು ಸಿಕ್ಕಿಕೊಂಡಿರುವ ಪಿಟ್ ಬುಲ್-ಹಸ್ಕಿ ನಾಯಿಯನ್ನು ರಕ್ಷಿಸುವ ಚಿತ್ರ ಕಾಣಬಹುದು.

ಫೋಟೋಗಳಲ್ಲಿ, ಅಗ್ನಿಶಾಮಕ ದಳದ ಸದಸ್ಯರು ಮರದ ತುದಿಯಲ್ಲಿ ಸುಸ್ತಾಗಿ ಬಿದ್ದುಕೊಂಡಿದ್ದ ನಾಯಿಯನ್ನು ರಕ್ಷಿಸಲು ಏಣಿಯ ಮೇಲೆ ಏರುತ್ತಿರುವುದನ್ನು ಕಾಣಬಹುದು. ಸಿಬ್ಬಂದಿ ನಾಯಿಯನ್ನು ಸುರಕ್ಷಿತವಾಗಿ ಹೊರತೆಗೆದು ನಂತರ ಅದಕ್ಕೆ ಆಹಾರ ನೀಡಿದ್ದಾರೆ.

ಸಾಕಷ್ಟು ಪ್ರಯತ್ನಗಳ ನಂತರ, ನಾಯಿಯನ್ನು ಸುರಕ್ಷಿತವಾಗಿ ನೆಲಕ್ಕೆ ತರಲಾಯಿತು. ಬಹುಶಃ, ಅದು ಬದುಕಿರುವವರೆಗೂ ಅಳಿಲುಗಳನ್ನು ಬೆನ್ನಟ್ಟುವ ಸಾಹಸ ಮಾಡುವುದಿಲ್ಲ ಎಂದು ಕ್ಯಾಪ್ಷನ್​ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read