ಬಿಜೆಪಿಯವರಿಗೆ ಮಾನ – ಮರ್ಯಾದೆ ಇದೆಯಾ; ಅವರ ಅಧಿಕಾರಾವಧಿಯಲ್ಲೂ ಮುಸ್ಲಿಂ ವ್ಯಕ್ತಿ ನೇಮಕ: ರಾಮಲಿಂಗಾರೆಡ್ಡಿ ಕಿಡಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಅವಿಮುಕ್ತೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಅಭಿವೃದ್ಧಿ ನಿರ್ವಹಣೆಗೆ ನೇಮಿಸಿರುವ ಸಮಿತಿಯಲ್ಲಿ ನವಾಜ್ ಎಂಬ ವ್ಯಕ್ತಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ಹಿಂದೂ ದೇವಾಲಯಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

ಈ ಆರೋಪಕ್ಕೆ ಕಿಡಿ ಕಾರಿರುವ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅನ್ಯ ಕೋಮಿನ ವ್ಯಕ್ತಿಯನ್ನು ಸದಸ್ಯರನ್ನಾಗಿ ನೇಮಿಸುವ ಸಂಪ್ರದಾಯ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಅಂದು ಸಚಿವರಾಗಿದ್ದ ಎಂ ಟಿ ಬಿ ನಾಗರಾಜ್, ಬ್ರಹ್ಮ ರಥೋತ್ಸವ ಸಮಿತಿಗೆ ಒಮ್ಮೆ ಶೌಕತ್ ಎಂಬವರನ್ನು ನೇಮಿಸಿದ್ದು, ಮತ್ತೊಮ್ಮೆ ಇಮ್ತಿಯಾಜ್ ಪಾಷಾ ಸದಸ್ಯರಾಗಿದ್ದರು. ಇದರ ದಾಖಲೆಗಳು ತಮ್ಮ ಬಳಿ ಇದ್ದು, ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read