HomeKarnatakaಹೃದ್ರೋಗ, ಮಕ್ಕಳ ತಜ್ಞರು ಸೇರಿ 468 ವೈದ್ಯರ ನೇಮಕಾತಿಗೆ ನೇರ ಸಂದರ್ಶನ

ಹೃದ್ರೋಗ, ಮಕ್ಕಳ ತಜ್ಞರು ಸೇರಿ 468 ವೈದ್ಯರ ನೇಮಕಾತಿಗೆ ನೇರ ಸಂದರ್ಶನ

ಕಲಬುರಗಿ: ಕುವೈತ್ ದೇಶದಲ್ಲಿ ವೈದ್ಯರ ಭಾರಿ ಬೇಡಿಕೆ ಇರುವ ಪ್ರಯುಕ್ತ ಅಂತರರಾಷ್ಟ್ರೀಯ ವಲಸೆ ಕೇಂದ್ರದಿಂದ 468 ಜನ ವೈದ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜನವರಿ ತಿಂಗಳ ಕೊನೆಯ ವಾರದಲ್ಲಿ ನೇರ ನೇಮಕಾತಿ ಸಂದರ್ಶನ ಏರ್ಪಡಿಸಲಾಗಿದೆ.

ಆರು ವರ್ಷಕ್ಕೂ ಮೇಲ್ಪಟ್ಟು ಅನುಭವ ಹೊಂದಿರುವ ಅರವಳಿಕೆ ತಜ್ಞರು, ಸಾಮಾನ್ಯ ಶಸ್ತ್ರ ಚಿಕಿತ್ಸಕರು, ಅಂತರಿಕ ಔಷಧಿ ತಜ್ಞರು, ಪ್ರಸೂತಿ ಶಾಸ್ತ್ರಜ್ಞರು, ಸ್ತ್ರೀರೋಗ ತಜ್ಞರು, ಹೃದ್ರೋಗ ತಜ್ಞರು, ಮೂಳೆ ಚಿಕಿತ್ಸಕರು, ಮಕ್ಕಳ ತಜ್ಞರು, ತುರ್ತು ವಿಭಾಗ ತಜ್ಞರು, ಕುಟುಂಬ ವೈದ್ಯರು, ತೀವ್ರ ನಿಗಾ ಘಟಕ ತಜ್ಞರು, ವಿಕಿರಣ ಶಾಸ್ತ್ರಜ್ಞರು ಮತ್ತು ಇ.ಎನ್.ಟಿ.  (ENT)  ತಜ್ಞರ ನೇಮಕಾತಿಗಾಗಿ ನೇರ ನೇಮಕಾತಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸಕ್ತರು 2023ರ ಜನವರಿ 15 ರೊಳಗಾಗಿ ಜಿಲ್ಲಾ ಕೌಶಲ್ಯಾಭಿವೃಧ್ಧಿ ಅಧಿಕಾರಿ ಕಛೇರಿ, ‘ಡಿ’ ಬ್ಲಾಕ್, ಮೂರನೇ ಮಹಡಿ, ಐಟಿ ಪಾರ್ಕ್, ಕಿಯೋನಿಕ್ಸ್ ಬಿಲ್ಡಿಂಗ್, ಹೈಕೋರ್ಟ್ ಎದುರುಗಡೆ, ಕೆಎಚ್‍ಬಿ ಕಾಲೋನಿ, ಕಲಬುರಗಿ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಲೋಚಕರಾದ ಕೃಷ್ಣ ಕಟ್ಟಿಮನಿ ಇವರ ಮೊಬೈಲ್ ಸಂಖ್ಯೆ 8197614505 ಹಾಗೂ ಅರುಣಕುಮಾರ ಟಿ ಸಜ್ಜನ್ ಇವರ ಮೊಬೈಲ್ ಸಂಖ್ಯೆ 9632214436  ಹಾಗೂ   https://www.kaushalkar.com/doctor-registration-kuwait/ ಗಳಿಗೆ ಸಂಪರ್ಕಿಸಲು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular