HomeUncategorized2ನೇ ಮದುವೆಗೆ ರೆಡಿಯಾಗಿದ್ದ ವೈದ್ಯನ ಹತ್ಯೆಗೈದು ಚಿನ್ನಾಭರಣ ಲೂಟಿ: ಸ್ನೇಹಿತ ಅರೆಸ್ಟ್

2ನೇ ಮದುವೆಗೆ ರೆಡಿಯಾಗಿದ್ದ ವೈದ್ಯನ ಹತ್ಯೆಗೈದು ಚಿನ್ನಾಭರಣ ಲೂಟಿ: ಸ್ನೇಹಿತ ಅರೆಸ್ಟ್

ಕಾರವಾರ: ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿ ಎರಡನೇ ಮದುವೆಗೆ ಸಿದ್ದನಾಗಿದ್ದ ವೈದ್ಯನನ್ನು ಹತ್ಯೆ ಮಾಡಿದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ(68) ಬಂಧಿತ ಆರೋಪಿ. ಡಾ. ರಮೇಶ್ ಕಲಗುಟಕರ(51) ಕೊಲೆಯಾದ ವೈದ್ಯ.

ವೈದ್ಯ ರಮೇಶ್ ಅವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ರಮೇಶ್ ಸ್ನೇಹಿತನಾಗಿರುವ ಮಂಜುನಾಥ್ ಚಿನ್ನದ ಆಸೆಗೆ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ರಮೇಶ್ ಅವರ ಬಳಿ ಚಿಕಿತ್ಸೆಗಾಗಿ ಅನೇಕ ಬಾರಿ ಬಂದಿದ್ದ ಮಂಜುನಾಥ್ ಸ್ನೇಹಿತನಾಗಿದ್ದ. ರಮೇಶ್ ಹಲವು ಬಾರಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏ. 20ರಂದು ರಮೇಶ್ ಅವರ ಎರಡನೇ ಮದುವೆ ನಡೆಯಬೇಕಿತ್ತು. ಶನಿವಾರ ಅವರು ಬ್ಯಾಂಕಿಗೆ ಹೋಗಿ ಚಿನ್ನಾಭರಣ ಬಿಡಿಸಿಕೊಂಡು ಮನೆಗೆ ತಂದಿದ್ದರು. ಸ್ನೇಹಿತನಾಗಿದ್ದ ಆರೋಪಿಗೆ ಚಿನ್ನಾಭರಣ ತೋರಿಸಿದ್ದರು. ರಾತ್ರಿ ವೇಳೆ ವೈದ್ಯ ರಮೇಶ್ ಮಲಗಿದ್ದಾಗ ಆಯುಧದಿಂದ ಬಲವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಹತ್ಯೆ ನಡೆದ 24 ಗಂಟೆಯೊಳಗೆ ಚಿನ್ನಾಭರಣ ಸಹಿತ ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular