ಗಡ್ಡೆಯಿದೆ ಎಂದು ರೋಗಿಯ ಶಿಶ್ನವನ್ನೇ ಕತ್ತರಿಸಿ ಎಡವಟ್ಟು ಮಾಡಿದ ವೈದ್ಯರು….!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಅದಕ್ಕಾಗಿಯೇ ವೈದ್ಯೋ ನಾರಾಯಣ ಹರಿ ಎನ್ನುತ್ತಾರೆ. ಆದರೆ ವೈದ್ಯರು ನಿರ್ಲಕ್ಷ್ಯದಿಂದ ಚಿಕ್ಕ ತಪ್ಪು ಮಾಡಿದರೂ ಅದು ರೋಗಿಯ ಪ್ರಾಣವನ್ನೇ ಕಸಿದುಕೊಳ್ಳಬಹುದು. ಅಂಥದ್ದೇ ಒಂದು ಎಡವಟ್ಟಿನ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಶಿಶ್ನದಲ್ಲಿ ಗಡ್ಡೆ ಇದೆ ಎಂದು ತಪ್ಪಾಗಿ ಭಾವಿಸಿದ ವೈದ್ಯರು ರೋಗಿಯೊಬ್ಬನ ಶಿಶ್ನವನ್ನು ಕತ್ತರಿಸಿರುವ ಭಯಾನಕ ಘಟನೆ ನಡೆದಿದೆ. ಕೊನೆಗೆ ತಾವು ಮಾಡಿದ್ದು ತಪ್ಪು ಎಂದು ಅರಿವಾಗಿದೆ. ಈ ಘಟನೆ ನಡೆದಿರುವುದು ಅರೆಝೋದಲ್ಲಿನ ಸ್ಯಾನ್ ಡೊನಾಟೊ ಆಸ್ಪತ್ರೆಯಲ್ಲಿ.

60 ವರ್ಷದ ರೋಗಿಯ ಜೀವನದಲ್ಲಿ ವೈದ್ಯರು ಈ ರೀತಿ ಚೆಲ್ಲಾಟವಾಗಿದ್ದಾರೆ. ವೃಷಣ ಬಿಟ್ಟು ಬುಡದಲ್ಲಿ ಎಲ್ಲಾ ಅಂಗ ಕತ್ತರಿಸಲಾಗಿದೆ. ತಪ್ಪಿನ ಅರಿವಾಗಿ ಪುನಃ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ರೋಗಿಯ ಜೀವಕ್ಕೆ ಅಪಾಯ ಇಲ್ಲವಾದರೂ ಜೀವನ ಪೂರ್ತಿ ನೋವಿನಲ್ಲಿಯೇ ಇರುವ ಸ್ಥಿತಿ ಉಂಟಾಗಿದೆ.

ಅವರು ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ 1 ಮಿಲಿಯನ್ ಯುರೋ ಪರಿಹಾರಕ್ಕೆ ಕೇಸ್​ ಹಾಕಿದ್ದರು. ನಂತರ ಕೋರ್ಟ್​ ರೋಗಿಗೆ 62 ಸಾವಿರ ಯುರೋಗಳನ್ನು (ಸುಮಾರು 54 ಲಕ್ಷ ರೂಪಾಯಿ) ಪರಿಹಾರವಾಗಿ ನೀಡುವಂತೆ ಆಸ್ಪತ್ರೆಗೆ ಆದೇಶಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read