HomeHealthಪ್ರಯಾಣ ಮಾಡುವಾಗ ನಿಮಗೂ ಕಾಡುತ್ತಾ ವಾಕರಿಕೆ ಸಮಸ್ಯೆ.....? ಮಾಡಿ ಈ ಪರಿಹಾರ

ಪ್ರಯಾಣ ಮಾಡುವಾಗ ನಿಮಗೂ ಕಾಡುತ್ತಾ ವಾಕರಿಕೆ ಸಮಸ್ಯೆ…..? ಮಾಡಿ ಈ ಪರಿಹಾರ

ಪ್ರಯಾಣ ಮಾಡುವಾಗ ನಿಮಗೆ ವಾಂತಿ ಅಥವಾ ವಾಕರಿಕೆಯ ಅನುಭವವಾಗುತ್ತದೆಯೇ, ಅದನ್ನು ತಡೆಗಟ್ಟಲು ಕೆಲವು ಸಲಹೆಗಳು ಇಲ್ಲಿವೆ.

ಪ್ರಯಾಣಕ್ಕೆ ಮುನ್ನ ಅತಿಯಾದ ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ರಸ್ತೆ ತಿರುವುಗಳಲ್ಲಿ ವಾಹನ ಸಂಚರಿಸುವಾಗ ನಿಮ್ಮ ಹೊಟ್ಟೆ ತೊಳೆಸಿದಂತಾಗಿ ವಾಂತಿ ಬಂದ ಅನುಭವವಾಗಬಹುದು.

ಕೆಲವರಿಗೆ ವಾಹನದಲ್ಲಿ ಪ್ರಯಾಣಿಸುವಾಗ ತಲೆನೋವು ಕಾಣಿಸಿಕೊಳ್ಳಬಹುದು. ಇದಕ್ಕೆ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ತುಸು ಹೊತ್ತು ಕಣ್ಣು ಮುಚ್ಚಿ ಮಲಗಿ. ಸಣ್ಣ ನಿದ್ದೆ ಮಾಡಿದರೆ ತಲೆನೋವು ಮಾಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಯಾಣ ಮಾಡುವಾಗ ಒಂದು ಲಿಂಬೆಹಣ್ಣು ಅಥವಾ ಕಿತ್ತಳೆ ಹಣ್ಣನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇದರ ವಾಸನೆ ಪದೇ ಪದೇ ತೆಗೆದುಕೊಳ್ಳುತ್ತಿದ್ದರೆ ವಾಂತಿ ಬರುವುದಿಲ್ಲ. ಹಾಗಿದ್ದೂ ತೀವ್ರತರನಾದ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಿ. ಅವರು ಕೊಡುವ ಮಾತ್ರೆ ಸದಾ ನಿಮ್ಮೊಂದಿಗಿರಲಿ.

For Latest News Updates, Join Our Whatsapp Community🚩
RELATED ARTICLES

Most Popular