‘ಮಹಿಳೆ’ ಪುರುಷರಿಂದ ನಿರೀಕ್ಷಿಸುವುದೇನು ಗೊತ್ತಾ……?

ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತೊಂದಿದೆ. ಮನಸ್ಸಿನಲ್ಲಿ ಇದ್ದದ್ದೆಲ್ಲ ಬಾಯಿಗೆ ಬರುತ್ತೆ, ಗುಟ್ಟು ನಿಲ್ಲೋದಿಲ್ಲ. ಹಾಗಾಗಿ ಏನೂ ಹೇಳ್ಬಾರ್ದು ಅಂತಾ ಪುರುಷರು ಮಾತನಾಡಿಕೊಳ್ತಾರೆ. ಆದ್ರೆ ಮಹಿಳೆಯರೂ ಕೆಲವೊಂದನ್ನು ಮುಚ್ಚಿಡ್ತಾರೆ. ಪುರುಷರಿಂದ ಮಹಿಳೆಯರು ನಿರೀಕ್ಷಿಸುವ ಕೆಲವೊಂದು ವಿಷಯಗಳನ್ನು ಎಂದಿಗೂ ಹೇಳುವುದಿಲ್ಲ.

ಹೃದಯದಲ್ಲಿ ಮುಚ್ಚಿಟ್ಟ ಅವರ ಆಸೆಗಳನ್ನು ಕೇಳದೆ ಜಾರಿಗೆ ತರುವ ಪುರುಷ ಆಕೆಗೆ ಇಷ್ಟವಾಗ್ತಾನೆ. ಮಹಿಳೆಯರು ಪುರುಷರಿಂದ ನಿರೀಕ್ಷಿಸುವ ವಿಷಯ ಏನು ಅಂತಾ ನೀವೇ ಓದಿ.

ಮಹಿಳೆಯರು ಪುರುಷ ತನ್ನ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲಿ ಅಂತಾ ಬಯಸ್ತಾರೆ. ಮಹಿಳೆಯರಿಗೆ ಹೆಚ್ಚು ಕೇರ್ ತೆಗೆದುಕೊಳ್ಳುವ ಪುರುಷ ಬೇಗ ಇಷ್ಟವಾಗ್ತಾನೆ.

ಮೆಚ್ಚುಗೆ ಮಾತುಗಳನ್ನು ಕೇಳುವುದೆಂದ್ರೆ ಹುಡುಗಿಯರಿಗೆ ಇಷ್ಟ. ಬಾಯ್ ಫ್ರೆಂಡ್ ಅಥವಾ ಸಂಗಾತಿ ದಿನದಲ್ಲಿ ಐದು ಬಾರಿಯಾದ್ರೂ ತನ್ನ ಡ್ರೆಸ್ ಅಥವಾ ಸೌಂದರ್ಯ ಅಥವಾ ಮಾಡಿದ ಯಾವುದೋ ಕೆಲಸವನ್ನು ಮೆಚ್ಚಿ ಹೊಗಳಲಿ ಎನ್ನುವುದು ಆಕೆಯ ಬಯಕೆ.

ಟೈಟ್ ಜೀನ್ಸ್ ಧರಿಸುವ ಪುರುಷರೆಂದ್ರೆ ಕೆಲ ಮಹಿಳೆಯರಿಗೆ ಇಷ್ಟ. ಪುರುಷರ ಶರ್ಟ್ ಮಹಿಳೆಯನ್ನು ಆಕರ್ಷಿಸುತ್ತದೆ. ಸಂಶೋಧನೆ ಪ್ರಕಾರ ಪುರುಷನ ಬೆವರು ಮಹಿಳೆಗೆ ಇಷ್ಟವಂತೆ. ಹಾಗಾಗಿ ಸಂಗಾತಿ ತನ್ನನ್ನು ಎದೆಗವಚಿಕೊಳ್ಳಲಿ, ತೋಳುಗಳಲ್ಲಿ ಬಂಧಿ ಮಾಡಲಿ ಎಂದು ಆಕೆ ಬಯಸುತ್ತಾಳಂತೆ.

ಬಾಯ್ ಫ್ರೆಂಡ್ ಅಥವಾ ಸಂಗಾತಿ ರೋಮ್ಯಾಂಟಿಕ್ ಆಗಿರಬೇಕೆಂಬುದು ಮಹಿಳೆಯರ ನಿರೀಕ್ಷೆ. ಸಂಬಂಧ ಹಳೆಯದಾಗಿರಲಿ ಇಲ್ಲ ಹೊಸದಾಗಿರಲಿ ಸಂಗಾತಿ ಸದಾ ಬಾಯ್ ಫ್ರೆಂಡ್ ನಂತೆ ವರ್ತಿಸಬೇಕು, ಇಡೀ ಜೀವನ ಹನಿಮೂನ್ ನಂತಿರಬೇಕೆಂದು ನಿರೀಕ್ಷಿಸುತ್ತಾರೆ ಹುಡುಗಿಯರು.

ಕುಂದು ಕೊರತೆಗಳನ್ನು ಹೇಳಿಕೊಳ್ಳುವ ವ್ಯಕ್ತಿ ಪ್ರೀತಿಗೆ ಆಕೆ ಬೀಳ್ತಾಳೆ. ಪ್ರೀತಿ ಮಾಡುವ ಹುಡುಗ ಅಥವಾ ಸಂಗಾತಿ ಕೇವಲ ಸಂತೋಷದ ವಿಷಯವನ್ನು ಮಾತ್ರ ಹೇಳದೆ ತನ್ನ ನೋವನ್ನು ಹೇಳಿಕೊಳ್ಳಬೇಕೆಂಬುದು ಆಕೆಯ ನಿರೀಕ್ಷೆ.

ಸೆಕ್ಸ್ ವಿಚಾರದಲ್ಲಿ ತನ್ನ ಭಾವನೆಗಳಿಗೂ ಮಹತ್ವ ನೀಡಬೇಕೆಂದು ಮಹಿಳೆ ಬಯಸ್ತಾಳೆ. ಮೊದಲು ಆಕೆ ಇಚ್ಛೆ ಏನು ಎಂಬುದನ್ನು ತಿಳಿದುಕೊಂಡು, ಮಾತುಕತೆ ನಡೆಸಿ ನಂತರ ನಿರ್ಧಾರಕ್ಕೆ ಬರಬೇಕೆನ್ನುತ್ತಾಳೆ. ಸಂಶೋಧಕರ ಪ್ರಕಾರ ಶಾರೀರಿಕ ಸಂಬಂಧದ ಮೇಲೆ ಮಹಿಳೆ, ಪುರುಷ ತನ್ನನ್ನು ಮಗುವಿನಂತೆ ಪ್ರೀತಿಸಬೇಕೆಂದು ಬಯಸ್ತಾಳಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read