ಬೆತ್ತಲೆ ಮಲಗುವುದ್ರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…..?

ಆರೋಗ್ಯಕ ಜೀವನಕ್ಕೆ ನಿದ್ರೆ ಬಹಳ ಮುಖ್ಯ. ಅದ್ರಲ್ಲೂ ಬೆತ್ತಲೆ ಮಲಗುವುದ್ರಿಂದ ಎಷ್ಟೆಲ್ಲ ಲಾಭವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬಟ್ಟೆಯಲ್ಲದೆ ಮಲಗುವುದ್ರಿಂದ ಆರೋಗ್ಯ ಸಂಬಂಧಿ ಅನೇಕ ಲಾಭಗಳಿವೆ. ಬೆತ್ತಲೆ ಮಲಗುವುದು ಪುರುಷರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಪ್ರಯೋಜನ ನೀಡುತ್ತದೆ.

ಸಿಡಿಸಿ ಪ್ರಕಾರ, ಪ್ರತಿ ವಯಸ್ಕ ವ್ಯಕ್ತಿ ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. ಇದಕ್ಕಿಂತ ಕಡಿಮೆ ನಿದ್ದೆ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ. ಸ್ಲೀಪ್ ಫೌಂಡೇಶನ್ ಪ್ರಕಾರ,  ದೇಹವು ಸಿರ್ಕಾಡಿಯನ್ ರಿದಮ್ ಪ್ರಕಾರ ಚಲಿಸುತ್ತದೆ. ಇದು ದೇಹದ ಉಷ್ಣತೆಯನ್ನು ಅವಲಂಬಿಸಿರುತ್ತದೆ. 66 ರಿಂದ 70 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನದಲ್ಲಿ ನಿದ್ರಿಸುವುದು ಸೂಕ್ತ. ಬಟ್ಟೆ ಇಲ್ಲದೆ ಮಲಗುವುದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

ಸ್ಲೀಪ್ ಫೌಂಡೇಶನ್ ಹೇಳುವಂತೆ ಬಟ್ಟೆ ಇಲ್ಲದೆ ಮಲಗುವುದು ಕ್ಯಾಂಡಿಡಾ ಯೀಸ್ಟ್ ಸೋಂಕಿನಿಂದ ಮಹಿಳೆಯರಿಗೆ ರಕ್ಷಣೆ ನೀಡುತ್ತದೆ. ಬಿಗಿಯಾದ ಮತ್ತು ಸಿಂಥೆಟಿಕ್ ಒಳ ಉಡುಪುಗಳನ್ನು ಧರಿಸುವುದರಿಂದ ಸಾಕಷ್ಟು ಗಾಳಿಯಾಡುವುದಿಲ್ಲ. ಇದ್ರಿಂದ ಸೋಂಕು ಹರಡುತ್ತದೆ. ಆದ್ದರಿಂದ ಮಹಿಳೆಯರು ಬಟ್ಟೆಯಲ್ಲದೆ ಮಲಗಿದ್ರೆ ಯೋನಿ ತುರಿಕೆ ಮತ್ತು ಕ್ಯಾಂಡಿಡಾ ಸೋಂಕಿನಿಂದ ಉಂಟಾಗುವ ಅಪಾಯವನ್ನು ತಪ್ಪಿಸಬಹುದು.

ಸ್ಲೀಪ್ ಫೌಂಡೇಶನ್ ಪ್ರಕಾರ, ಬೆತ್ತಲೆಯಾಗಿ ಮಲಗುವುದು ಪುರುಷರ ಆರೋಗ್ಯಕ್ಕೂ ಪ್ರಯೋಜನಕಾರಿ. ಅನೇಕ ಸಂಶೋಧನೆಗಳಲ್ಲಿ ಬಿಗಿಯಾದ ಒಳ ಉಡುಪು ಧರಿಸುವುದರಿಂದ ಖಾಸಗಿ ಅಂಗದ ಉಷ್ಣತೆಯು ಹೆಚ್ಚಾಗುತ್ತದೆ. ಇದು ವೀರ್ಯದ ಗುಣಮಟ್ಟವನ್ನು ಹಾಳು ಮಾಡುತ್ತದೆ. ತಾಪಮಾನ ಸಾಮಾನ್ಯವಾಗಿದ್ದರೆ, ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸುತ್ತದೆ.

ಇಷ್ಟೇ ಅಲ್ಲ, ಬೆತ್ತಲೆ ಮಲಗುವುದ್ರಿಂದ ಇನ್ನಷ್ಟು ಪ್ರಯೋಜನವಿದೆ. ಬೆತ್ತಲೆ ಮಲಗಿದ್ರೆ ನಿದ್ರೆ ಉತ್ತಮವಾಗಿ ಬಂದು ಚರ್ಮವು ಆರೋಗ್ಯಕರವಾಗಿರುತ್ತದೆ. ತೂಕ ಇಳಿಕೆಗೆ ನೆರವಾಗುತ್ತದೆ. ಸ್ವಾಭಿಮಾನ ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗೆ ಸಂಗಾತಿ ಜೊತೆಗಿನ ಸಂಬಂಧ ಬಲಗೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read