ಕರ್ಬೂಜ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…..?

ದೇಹದ ಆರೋಗ್ಯಕ್ಕೆ ಸಹಕಾರಿ ಈ ಕರ್ಬೂಜ. ಕರ್ಬೂಜ ಹಣ್ಣು ದೇಹಕ್ಕೆ ತಂಪು ಕೊಡುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಇದು ಉಪಕಾರಿ.

ಬೇಸಿಗೆಯಲ್ಲಿ ಸಿಗುವ ಈ ಕರ್ಬೂಜ ಹಣ್ಣನ್ನು ತಿನ್ನುವುದರಿಂದ ಪಿತ್ತ ಶಮನವಾಗುತ್ತದೆ. ಉಷ್ಣ ಸಮಸ್ಯೆ ನಿವಾರಣೆ ಆಗುತ್ತದೆ. ಚರ್ಮ ವ್ಯಾಧಿಗಳು, ಮುಖದ ಮೇಲೆ ನೆರಿಗೆಗಳು, ತಲೆ ಕೂದಲು ಉದುರುವುದು, ಹೊಟ್ಟೆ ಉರಿ, ಕಣ್ಣಲ್ಲಿ ಉರಿ, ಅಂಗೈ, ಅಂಗಾಲು ಉರಿಯುವಿಕೆ, ಮಲಬದ್ಧತೆಯನ್ನು ನಿವಾರಿಸುತ್ತದೆ.

ಕಫದ ತೊಂದರೆ ಇರುವವರು ಕರ್ಬೂಜ ಹಣ್ಣನ್ನು ಹಿತಮಿತವಾಗಿ ಸೇವಿಸುವುದು ಒಳ್ಳೆಯದು. ಅತಿಯಾಗಿ ಬಳಸಿದರೆ ಕಫದ ತೊಂದರೆಗಳು ಜಾಸ್ತಿಯಾಗುತ್ತವೆ.

ಹಾಗೇನೇ ಕರ್ಬೂಜದ ಹಣ್ಣನ್ನು ನೆರಳಿನಲ್ಲಿ ಒಣಗಿಸಿ ಒಣಗಿದ ನಂತರ ಅದರ ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ದಿನನಿತ್ಯ ಉಪಯೋಗಿಸಿದರೆ ಮೂಳೆಗಳು ಗಟ್ಟಿಯಾಗುತ್ತವೆ.

ಕರ್ಬೂಜ ಹಣ್ಣಿನಲ್ಲಿ ಮಿನರಲ್ಸ್ ಹೇರಳವಾಗಿವೆ, ಇವು ಮೂಳೆಗಳನ್ನು ಬಲಪಡಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read