HomeBeautyಬಾಳೆಹಣ್ಣು ಉಪಯೋಗಿಸಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ.....?

ಬಾಳೆಹಣ್ಣು ಉಪಯೋಗಿಸಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ…..?

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ ಕಾರಣಗಳಿಂದ ನಿಮ್ಮ ಮುಖದ ಮೇಲೆ ನೇರವಾಗಿ ಬಿಸಿಲು ಬಿದ್ದುದರಿಂದ ಹೀಗಾಗಿದ್ರೆ. ಅದಕ್ಕೆ ಬಾಳೆಹಣ್ಣಿನಲ್ಲಿದೆ ಪರಿಹಾರ.

ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಕಿವುಚಿ ಒಂದು ಚಮಚ ಜೇನು ಸೇರಿಸಿ ಅದಕ್ಕೆ ಅರ್ಧ ಚಮಚ ಹಾಲಿನ ಕೆನೆ ಬೆರೆಸಿ ಪೇಸ್ಟ್ ತಯಾರಿಸಿ. ಅದನ್ನು ಮುಖಕ್ಕೆ ಹಚ್ಚಿದ ಹದಿನೈದು ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಲ್ಲಿ ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಮೃದುವಾಗುತ್ತದೆ ಮಾತ್ರವಲ್ಲ ಆದ್ರತೆಯನ್ನೂ ಪಡೆದುಕೊಳ್ಳುತ್ತದೆ.

ಹಾಗಾದರೆ ಇಂದೇ ಪ್ರಯತ್ನಿಸಿ. ಹೊಳೆಯುವ ಮುಖಾರವಿಂದ ನಿಮ್ಮದಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular