HomeAuto'ಜೈಲರ್' ಚಿತ್ರದ ವಿಲನ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

‘ಜೈಲರ್’ ಚಿತ್ರದ ವಿಲನ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

T K Vinayakan to play villain in Rajnikanth's 'Jailer'

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಭರ್ಜರಿ ಯಶಸ್ಸು ಸಾಧಿಸಿದ್ದು, ಈಗಾಗಲೇ ನೂರಾರು ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ. ಬಹು ಭಾಷೆಗಳಲ್ಲಿ ದೇಶ ವಿದೇಶಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ತಲೈವಾ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಈ ಚಿತ್ರದಲ್ಲಿ ಖಳನಟರಾಗಿ ಅಭಿನಯಿಸಿದ್ದ ವಿನಾಯಕನ್ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಎಲ್ಲರ ಗಮನ ಸೆಳೆದಿದ್ದರು. ‘ಜೈಲರ್’ ಅಭೂತಪೂರ್ವ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕರು, ಪ್ರಮುಖ ಕಲಾವಿದರು ಹಾಗೂ ತಂತ್ರಜ್ಞರಿಗೆ ನಿರೀಕ್ಷೆಗೂ ಮೀರಿದ ಸಂಭಾವನೆ ನೀಡುವುದರ ಜೊತೆಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಈ ಕುರಿತ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ‘ಜೈಲರ್’ ಚಿತ್ರದ ಖಳನಟನಾಗಿ ಅಬ್ಬರಿಸಿದ್ದ ವಿನಾಯಕನ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಮೂಲಗಳ ಪ್ರಕಾರ ವಿನಾಯಕನ್ ಅವರಿಗೆ 35 ಲಕ್ಷ ರೂಪಾಯಿಗಳ ಸಂಭಾವನೆ ನೀಡಲಾಗಿತ್ತು ಎನ್ನಲಾಗಿದ್ದು, ‘ಜೈಲರ್’ ಯಶಸ್ಸಿನ ಬಳಿಕ ಇದರ ಮೂರು ಪಟ್ಟು ಹೆಚ್ಚು ಹಣವನ್ನು ನೀಡಲಾಗಿದೆಯಂತೆ. ಅಂದರೆ ಸರಿ ಸುಮಾರು ಒಂದು ಕೋಟಿ ರೂಪಾಯಿಗಳ ಸಂಭಾವನೆಯನ್ನು ವಿನಾಯಕನ್ ಅವರಿಗೆ ನೀಡಲಾಗಿದ್ದು, ಆದರೆ ಸಿನಿ ಪ್ರೇಕ್ಷಕರು ಮಾತ್ರ, ಇತರೆ ಪ್ರಮುಖ ಕಲಾವಿದರು ದೊಡ್ಡಮಟ್ಟದ ಸಂಭಾವನೆ ಜೊತೆಗೆ ಐಷಾರಾಮಿ ಕಾರುಗಳನ್ನು ಪಡೆದಿರುವಾಗ ವಿನಾಯಕನ್ ಅವರಿಗೆ ನೀಡಿದ ಸಂಭಾವನೆ ಭಾರಿ ಕಡಿಮೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular