HomeHealthರೋಗಾಣುಗಳನ್ನು ಹರಡುವ ಪುಟ್ಟ ʼನೊಣʼ ಎಷ್ಟು ಡೇಂಜರ್ ಗೊತ್ತಾ.....?

ರೋಗಾಣುಗಳನ್ನು ಹರಡುವ ಪುಟ್ಟ ʼನೊಣʼ ಎಷ್ಟು ಡೇಂಜರ್ ಗೊತ್ತಾ…..?

ಬೇಸಿಗೆ ಬಂತೆಂದರೆ ಸಾಕು ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು ಹರಡುವ ಮುಖ್ಯ ಕೀಟವಾಗಿದೆ.

ನೊಣ ಆಹಾರವನ್ನು ತಿನ್ನುವ ರೀತಿ ತುಂಬ ವಿಚಿತ್ರ. ಆಹಾರದ ಮೇಲೆ ಕೂರುವ ಇದು, ಮೊದಲು ಅದರ ಮೇಲೆ ಜೊಲ್ಲು ರಸ (saliva)ವನ್ನು ಮತ್ತು ಇತರ ಜೀರ್ಣರಸ (digestive juices) ಗಳನ್ನು ಬಿಡುತ್ತದೆ. ಇದರಿಂದಲೇ ಆಹಾರಗಳು ಅಧಿಕ ಪ್ರಮಾಣದಲ್ಲಿ ಮಲಿನಗೊಳ್ಳುತ್ತವೆ. ಇವು ಅನೇಕ ಭಯಂಕರ ರೋಗಾಣುಗಳನ್ನು ಹರಡಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗುತ್ತವೆ.

ನೊಣ ಇನ್ನೊಂದು ರೀತಿಯಲ್ಲಿ ಆಹಾರವನ್ನು ಕಲುಷಿತಗೊಳಿಸುತ್ತವೆ. ಅವು ತಮ್ಮ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಕಾಲ್ಗಳನ್ನು ಪರಸ್ಪರ ಉಜ್ಜಿಳ್ಳುತ್ತವೆ. ಹೀಗೆ ಮಾಡಿದಾಗ ಅವುಗಳ ಕಾಲಿನಲ್ಲಿರುವ ರೋಗಾಣುಗು ಆಹಾರದ ಮೇಲೆ ಬೀಳುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೊಣಗಳು ಆಹಾರವನ್ನು ಕಲುಷಿತಗೊಳಿಸುವುದರಿಂದ ಟೈಫಾಯಿಡ್, ಕ್ಷಯ ಮತ್ತು ಆಮಶಂಕೆ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಹವಾಮಾನ ತಣ್ಣಗಿದ್ದರೆ ಹೆಚ್ಚುಕಾಲ ಬದುಕುವ ಇವು ಬಿರುಬೇಸಿಗೆಯಲ್ಲಿ ಸಾಯುತ್ತವೆ. ಹಾಗಾಗಿ ಇಂತಹ ರೋಗಗಳನ್ನು ಉಂಟು ಮಾಡುವ ನೊಣಗಳಿಂದ ಹುಷಾರಾಗಿರಿ.

For Latest News Updates, Join Our Whatsapp Community🚩
RELATED ARTICLES

Most Popular