ನೀವೂ ʼಮಕ್ಕಳʼ ಮೇಲೆ ಕೂಗಾಡ್ತೀರಾ……? ಹಾಗಾದ್ರೆ ಇದನ್ನೊಮ್ಮೆ ಓದಿ

 

ಸಾಮಾನ್ಯವಾಗಿ 14-15 ವರ್ಷದ ಮಕ್ಕಳದ್ದು ತುಂಬಾ ತುಂಟ ಸ್ವಭಾವ. ಈ ವಯಸ್ಸಿನಲ್ಲಿ ಹುಡುಗಾಟ ಹೆಚ್ಚು. ಓದಿನ ಕಡೆಗೂ ಗಮನ ಕಡಿಮೆಯಾಗಿರುತ್ತದೆ. ಅಂತಹ ಮಕ್ಕಳ ಮೇಲೆ ತಂದೆ-ತಾಯಿ ರೇಗಾಡುವುದು ಸಹಜ.

ಪ್ರೀತಿಯಿಂದ ಹೇಳಿದರೆ ಮಕ್ಕಳಿಗೆ ಅರ್ಥವಾಗದು ಎಂದುಕೊಂಡು ಹೆತ್ತವರು ಕಿರುಚಾಡುತ್ತಾರೆ. ಆದ್ರೆ ಈ ರೀತಿ ಮಾಡುವುದರಿಂದ ಮಕ್ಕಳಲ್ಲಿರುವ ಸಂವಹನ ಶಕ್ತಿಯೇ ಕುಂಠಿತವಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ಸಮಾಧಾನವಾಗಿ ತಿಳಿಸಿ ಹೇಳಿದ್ರೆ ಮಾತ್ರ ಅದು ಮಕ್ಕಳಿಗೆ ಅರ್ಥವಾಗುತ್ತದೆ. ಜೊತೆಗೆ ಪರಿಣಾಮವೂ ಧನಾತ್ಮಕವಾಗಿರುತ್ತದೆ. ಕಾರ್ಡಿಫ್ ಯೂನಿವರ್ಸಿಟಿಯಲ್ಲಿ ಈ ಬಗ್ಗೆ ಸಂಶೋಧನೆ ಮಾಡಲಾಗಿದೆ. ಶಾಲಾ ಶಿಕ್ಷಕರ ಪ್ರೇರಕ ಭಾಷೆಯ ಬಳಕೆಯು ವಿದ್ಯಾರ್ಥಿಗಳ ಕಲಿಕೆ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಇದರಿಂದ ಹದಿಹರೆಯದವರು ಹೆಚ್ಚು ಕಾಳಜಿ ವಹಿಸುತ್ತಾರೆ, ಸಂತೋಷವಾಗಿರುತ್ತಾರೆ. ಕಲಿಕೆಯಲ್ಲೂ ಹೆಚ್ಚು ಆಸಕ್ತಿ ತೋರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read