HomeHealthಮಕ್ಕಳಲ್ಲಿ ಕಾಣಿಸಿಕೊಳ್ಳುವ ʼಮಲಬದ್ಧತೆʼ ನಿವಾರಿಸಲು ಹೀಗೆ ಮಾಡಿ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ʼಮಲಬದ್ಧತೆʼ ನಿವಾರಿಸಲು ಹೀಗೆ ಮಾಡಿ

ಮಲಬದ್ಧತೆ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತದೆ. ಅದರಲ್ಲೂ ಚಿಕ್ಕಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎನ್ನುಬಹುದು. ಇದರಿಂದ ಆ ಮಕ್ಕಳು ತುಂಬಾನೇ ನೋವು ಕೂಡ ಅನುಭವಿಸುತ್ತಾರೆ. ಮಕ್ಕಳಲ್ಲಿ ಕಾಡುವ ಈ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.

5 ವರ್ಷದ ಮೇಲಿನ ಮಕ್ಕಳಿಗಾದರೆ 8-10 ಒಣದ್ರಾಕ್ಷಿಯನ್ನು 2 ಟೇಬಲ್ ಸ್ಪೂನ್ ಬಿಸಿ ನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಇದನ್ನು ಚೆನ್ನಾಗಿ ಹಿಸುಕಿ ಸಿಪ್ಪೆ ಬೇರ್ಪಡಿಸಿ ಅದರ ರಸವನ್ನು ಮಕ್ಕಳಿಗೆ ಕುಡಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೇ 3 ಟೇಬಲ್ ಸ್ಪೂನ್ ನಷ್ಟು ಹೆಸರುಬೇಳೆಯನ್ನು ಚೆನ್ನಾಗಿ ಬೇಯಿಸಿಕೊಂಡು ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ 1 ಚಮಚ ತುಪ್ಪ ಸೇರಿಸಿ ಮಕ್ಕಳಿಗೆ ಕೊಡಿ.

ಹಾಗೇ ಪುಟ್ಟಬಾಳೆ ಹಣ್ಣನ್ನು ದಿನಕ್ಕೆ ಒಂದು ಕೊಡಿ. ಬಿಸಿ ಬಿಸಿ ನೀರನ್ನು ಕುಡಿಸಿ. ನಾರಿನಾಂಶವಿರುವ ಆಹಾರವನ್ನು ಹೆಚ್ಚೆಚ್ಚು ಸೇವಿಸಲು ಕೊಡಿ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular