ಮಹಾಲಯ ಅಮವಾಸ್ಯೆಯಂದು ತಪ್ಪದೆ ಈ ಕೆಲಸ ಮಾಡಿ

 

ಅ. 2 ರಂದು ಮಹಾಲಯ ಅಮವಾಸ್ಯೆ. ಪಿತೃಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವ ಪಿತೃ ಅಮವಾಸ್ಯೆ ಎಂದೂ ಕರೆಯಲಾಗುತ್ತದೆ. ನಮ್ಮನ್ನಗಲಿದ ಎಲ್ಲರಿಗೂ ಅವರು ನಿಧನರಾದ ತಿಥಿಯಂದು ಪಿಂಡ ಇಡುವುದು ಕಷ್ಟ. ಹಾಗಾಗಿ ಮಹಾಲಯ ಅಮವಾಸ್ಯೆಯಂದು ನಮ್ಮನ್ನಗಲಿದವರ ಆತ್ಮಕ್ಕೆ ಶಾಂತಿ ಕೋರಿ ಪಿಂಡವಿಡಲಾಗುತ್ತದೆ.

ಅಂದು ಒಂದೊಳ್ಳೆ ಕೆಲಸ ಮಾಡಿದ್ರೆ ಅಗಲಿದ ಹಿರಿಯರು ತೃಪ್ತರಾಗ್ತಾರೆ. ಲಕ್ಷ್ಮಿ ನಮ್ಮ ಮನೆಗೆ ಖುದ್ದು ಬರ್ತಾಳೆಂಬ ನಂಬಿಕೆ ಇದೆ. ಕೆಳಗೆ ಹೇಳಿದ ಕೆಲಸಗಳಲ್ಲಿ ಒಂದು ಕೆಲಸ ಮಾಡಿದ್ರೂ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಆರ್ಥಿಕ ವೃದ್ಧಿಯಾಗಲಿದೆ.

ಶನಿಯ ಪ್ರಭಾವ ನಿಮ್ಮ ಮೇಲಿದ್ದರೆ ಎಣ್ಣೆ, ಕರಿ ಎಳ್ಳು, ಕಬ್ಬಿಣ, ಕಪ್ಪು ಬಣ್ಣದ ಬಟ್ಟೆಯನ್ನು ದಾನ ಮಾಡಿ.

ಮಹಾಲಯ ಅಮವಾಸ್ಯೆಯಂದು ಆಹಾರ ದಾನ ಮಾಡುವುದು ಬಹಳ ಒಳ್ಳೆಯದು.

ಪೂರ್ವಜರ ಹೆಸರಿನಲ್ಲಿ ಹಸು, ನಿರ್ಗತಿಕರು ಅಥವಾ ಬ್ರಾಹ್ಮಣರಿಗೆ ಭೋಜನ ನೀಡುವುದು ಬಹಳ ಶ್ರೇಯಸ್ಕರ.

ನಿರ್ಗತಿಕರಿಗೆ ಹಾಲನ್ನು ದಾನ ಮಾಡಿ.

ವಿಧಿ – ವಿಧಾನದ ಮೂಲಕ ಪಿಂಡ ದಾನವನ್ನು ಮಾಡಿ. ಭಗವಂತ ವಿಷ್ಣುವಿನ ಸ್ಮರಣೆ ಮಾಡುವುದು ಬಹಳ ಒಳ್ಳೆಯದು. ‘ಓಂ ನಮೋಃ ಭಗವತೇ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ಜಪಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read