HomeLatest Newsಸುಟ್ಟ ಕಲೆ ಹೋಗಲಾಡಿಸಲು ಹೀಗೆ ಮಾಡಿ

ಸುಟ್ಟ ಕಲೆ ಹೋಗಲಾಡಿಸಲು ಹೀಗೆ ಮಾಡಿ

ತ್ವಚೆಯ ಮೇಲೆ ಸುಟ್ಟ ಕಲೆಗಳಾದರೆ ಅದು ಸುಲಭದಲ್ಲಿ ಹೋಗುವುದೇ ಇಲ್ಲ. ಯಾವ ಆಯಿಂಟ್ ಮೆಂಟ್ ಗಳು ಕಲೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದಿಲ್ಲ. ಕೆಲವಷ್ಟು ಮನೆ ಮದ್ದುಗಳು ಈ ಕಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತವೆ.

ನಿಂಬೆ ಮತ್ತು ಟೊಮೆಟೊ ರಸವನ್ನು ಒಣಗಿದ ಕಲೆಯ ಮೇಲೆ ಹಚ್ಚುವುದರಿಂದ ನಿಧಾನಕ್ಕೆ ಅಲ್ಲಿ ಹೊಸ ತ್ವಚೆ ಬೆಳೆಯುತ್ತದೆ ಮತ್ತು ಕಲೆಯ ಗುರುತನ್ನು ಹೋಗಲಾಡಿಸುತ್ತದೆ.

ಬಾದಾಮಿ ಎಣ್ಣೆಯಿಂದ ಗಾಯವಾದ ಜಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಗಾಯ ಮಾಯುತ್ತದೆ ಹಾಗೂ ಕಲೆಯೂ ಉಳಿಯುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೆಂತೆ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ನುಣ್ಣಗೆ ರುಬ್ಬಿ. ಇದನ್ನು ಸುಟ್ಟ ಗಾಯದ ಗುರುತುಗಳಿಗೆ ಹಚ್ಚಿ. ನಂಜುನಿರೋಧಕ ಗುಣ ಹೊಂದಿರುವ ಇದು ತ್ವಚೆಯ ಮೇಲೆ ಅತ್ಯುತ್ತಮ ಪರಿಣಾಮ ಬೀರುತ್ತದೆ.

ಆಲೂಗಡ್ಡೆಯ ಸಿಪ್ಪೆಗಳನ್ನು ಗಾಯವಿರುವ ಜಾಗಕ್ಕೆ ತಿಕ್ಕುವುದರಿಂದ, ಅರಶಿನ ತೇದು ಹಚ್ಚಿಕೊಳ್ಳುವುದರಿಂದಲೂ ಈ ಕಲೆಯನ್ನು ಹೋಗಲಾಡಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular