ಪರ್ಸ್ ನಲ್ಲಿ’ದುಡ್ಡು’ ಸದಾ ಇರಬೇಕೆಂದರೆ ಹೀಗೆ ಮಾಡಿ

ಕೆಲವೊಮ್ಮೆ ಕಷ್ಟಪಟ್ಟು ದುಡಿದು ಗಳಿಸಿದ ದುಡ್ಡು ಪರ್ಸ್ ನಲ್ಲಿ ಉಳಿಯುವುದೇ ಇಲ್ಲ. ಯಾವುದ್ಯಾವುದೋ ರೂಪದಲ್ಲಿ ದುಡ್ಡು ಖಾಲಿಯಾಗುತ್ತದೆ. ಇದಕ್ಕೆ ಸುಲಭವಾದ ಪರಿಹಾರವೊಂದು ಇಲ್ಲಿದೆ. ಈ ವಿಧಾನ ಅನುಸರಿಸುವುದರಿಂದ ನಿಮ್ಮ ಪರ್ಸ್ ನಲ್ಲಿ ಲಕ್ಷ್ಮೀದೇವಿ ಯಾವಾಗಲೂ ನೆಲೆಸಿರುತ್ತಾಳೆ.

ಇದಕ್ಕೆ ಪಾಲಿಸಬೇಕಾದ ನಿಯಮಗಳು ಯಾವುದೆಂದರೆ, ಪರ್ಸ್ ಅನ್ನು ಒಂದು ಒಳ್ಳೆಯ ದಿನ ಕೊಂಡುಕೊಳ್ಳಬೇಕು. ಹಾಗೇ ತೆಗೆದುಕೊಂಡ ಪರ್ಸ್ ನಲ್ಲಿ ಏನೇನೋ ಇಟ್ಟುಕೊಳ್ಳಬೇಡಿ. ಅದನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಪರ್ಸ್ ಅನ್ನು ಒಂದು ಶುಭದಿನದಂದು ದೇವರ ಕೋಣೆಯಲ್ಲಿಟ್ಟು ಒಂದು ಕಾಗದದ ಮೇಲೆ ಸ್ವಸ್ತಿಕ್ ಬರೆದು ಅದರೊಳಗೆ ಒಂದು ನಾಣ್ಯವನ್ನು ಇಟ್ಟು ಪೂಜೆ ಮಾಡಿ.

 ನಂತರ ಅದಕ್ಕೆ ಅರಿಶಿನ, ಕುಂಕುಮವನ್ನು ಹಚ್ಚಿ ಲಕ್ಷ್ಮೀದೇವಿಯನ್ನು ಪ್ರಾರ್ಥಿಸಿ. ಆ ಕಾಗದವನ್ನು ನಾಣ್ಯದ ಸಮೇತ ಮಡಚಿಕೊಂಡು ಅದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ. ಈ ರೀತಿಯಾಗಿ ಮಾಡುವುದರಿಂದ ನೀವು ದುಡಿದ ದುಡ್ಡು ನಿಮ್ಮ ಕೈ ಸೇರುತ್ತದೆ. ಜತೆಗೆ ಹಣಕಾಸಿನ ಸಮಸ್ಯೆ ಕೂಡ ಎದುರಾಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read