HomeHealthಮುಟ್ಟಿನ ಸಮಸ್ಯೆ ನಿವಾರಣೆಗೆ ಆಯುರ್ವೇದದ ಪ್ರಕಾರ ಮಾಡಿ ಈ ಪರಿಹಾರ

ಮುಟ್ಟಿನ ಸಮಸ್ಯೆ ನಿವಾರಣೆಗೆ ಆಯುರ್ವೇದದ ಪ್ರಕಾರ ಮಾಡಿ ಈ ಪರಿಹಾರ

ಬಾಯಿ ಚಪ್ಪರಿಸುತ್ತ ತಿನ್ನುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು ವಿಟಮಿನ್ ಸಿ ಅಂಶ ನೆಲ್ಲಿಕಾಯಿಯಲ್ಲಿದೆ. ಎಲ್ಲ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುವ ಶಕ್ತಿ ಇದಕ್ಕಿದೆ. ಫೈಬರ್, ಪ್ರೋಟೀನ್ ಮತ್ತು ಜೀವಸತ್ವಗಳಿರುವ ನೆಲ್ಲಿಕಾಯಿ, ರಕ್ತವನ್ನು ಶುದ್ಧಗೊಳಿಸಲು ಸಹಕಾರಿ.

ಆಯುರ್ವೇದದ ಪ್ರಕಾರ ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಜ್ಯೂಸ್ ಗೆ ಜೇನು ತುಪ್ಪ ಸೇರಿಸಿಕೊಂಡು ಕುಡಿಯುವುದರಿಂದ ಅಸ್ತಮಾ ದೂರವಾಗುತ್ತದೆ.

ನೆಲ್ಲಿಕಾಯಿ ಜ್ಯೂಸ್ ನಮ್ಮ ಹೃದಯ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಬಿಪಿ ಕೂಡ ನಿಯಂತ್ರಣದಲ್ಲಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಯಾಪಚಯಕ್ಕೆ ನೆಲ್ಲಿಕಾಯಿ ಜ್ಯೂಸ್ ಒಳ್ಳೆಯದು. ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ.

ದಿನನಿತ್ಯ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಮೊಡವೆ ದೂರ ಮಾಡಲು ನೆಲ್ಲಿಕಾಯಿ ಜ್ಯೂಸ್ ಬೆಸ್ಟ್.

ದಿನದಲ್ಲಿ ಎರಡು ಬಾರಿ ನೆಲ್ಲಿಕಾಯಿ ಜ್ಯೂಸನ್ನು ಬಾಳೆಹಣ್ಣಿನ ಜೊತೆ ಸೇವನೆ ಮಾಡುವುದರಿಂದ ಮಹಿಳೆಯರ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ನೆಲ್ಲಿಕಾಯಿ ಜ್ಯೂಸ್ ಗೆ ಅರಿಶಿನ ಪುಡಿ ಹಾಗೂ ಜೇನು ತುಪ್ಪ ಬೆರೆಸಿ ಕುಡಿಯುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.

ಕಣ್ಣಿನ ಸಮಸ್ಯೆ ಇರುವವರಿಗೂ ನೆಲ್ಲಿಕಾಯಿ ಜ್ಯೂಸ್ ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular