HomeAstroಮುಂಜಾನೆ ʼಬೆಡ್ ಟೀʼ ಕುಡಿಯುವ ಮೊದಲು ಈ ಕೆಲಸ ಮಾಡಿ

ಮುಂಜಾನೆ ʼಬೆಡ್ ಟೀʼ ಕುಡಿಯುವ ಮೊದಲು ಈ ಕೆಲಸ ಮಾಡಿ

ಈಗ ಜೀವನ ಶೈಲಿ ಬದಲಾಗಿದೆ. ಜನರು ಬೆಳಿಗ್ಗೆ ಏಳ್ತಾ ಇದ್ದಂತೆ ಹಾಸಿಗೆ ಮೇಲೆಯೇ ಕುಳಿತು ಕಾಫಿ ಹೀರ್ತಾರೆ. ಶಾಸ್ತ್ರಗಳ ಪ್ರಕಾರ ಇದು ಒಳ್ಳೆಯದಲ್ಲ. ಬೆಳಿಗ್ಗೆ ಎದ್ದ ತಕ್ಷಣ ಮುಖ, ಕೈ ತೊಳೆಯದೆ ಏನನ್ನೂ ತಿನ್ನಬಾರದು, ಕುಡಿಯಬಾರದು. ಇದು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗ್ರಹಗಳಲ್ಲಿ ಏರುಪೇರಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಕೈ, ಕಾಲು, ಮುಖ ತೊಳೆದು ಒಂದು ಗ್ಲಾಸ್ ನೀರು ಕುಡಿಯಿರಿ. ನಂತ್ರ ಟೀ ಅಥವಾ ಕಾಫಿ ಕುಡಿಯಿರಿ. ಬೆಳಿಗ್ಗೆ ಎದ್ದು ಯಾರ ಮುಖ ನೋಡಿದ್ನೋ ಅಂತಾ ಅನೇಕರು ಗೊಣಗ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಮೊದಲು ಏನು ನೋಡ್ತೇವೋ ಅದು ಶುಭ ಅಥವಾ ಅಶುಭಕ್ಕೆ ಕಾರಣ ಎಂದು ನಾವು ನಂಬಿದ್ದೇವೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಒಳ್ಳೆಯದನ್ನು ನೋಡ ಬಯಸ್ತೇವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಸ್ತ್ರಗಳ ಪ್ರಕಾರ ನಮ್ಮ ಹಸ್ತದಲ್ಲಿ ಸೃಷ್ಟಿಕರ್ತ ಬ್ರಹ್ಮ, ಧನಲಕ್ಷ್ಮಿ ಹಾಗೂ ಸರಸ್ವತಿ ನೆಲೆಸಿರುತ್ತಾರಂತೆ. ಹಾಗಾಗಿ ಬೆಳ್ಳಂಬೆಳಿಗ್ಗೆ ಹಸ್ತವನ್ನು ನೋಡಿಕೊಳ್ಳುವುದು ಬಹಳ ಒಳ್ಳೆಯದು. ಇದ್ರ ಜೊತೆಗೆ ಮಂತ್ರ ಹೇಳುವುದು ಬಹಳ ಒಳ್ಳೆಯದು.

ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||

For Latest News Updates, Join Our Whatsapp Community🚩
RELATED ARTICLES

Most Popular