HomeAstroಪ್ರತಿನಿತ್ಯ ಈ ಕೆಲಸ ಮಾಡಿದ್ರೆ ಮನೆ ಮೇಲೆ ಬೀಳಲ್ಲ 'ಕೆಟ್ಟ ದೃಷ್ಟಿ'

ಪ್ರತಿನಿತ್ಯ ಈ ಕೆಲಸ ಮಾಡಿದ್ರೆ ಮನೆ ಮೇಲೆ ಬೀಳಲ್ಲ ‘ಕೆಟ್ಟ ದೃಷ್ಟಿ’

ಹಳೆ ಸಂಪ್ರದಾಯದಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಕೆಲ ಪದ್ಧತಿಗಳನ್ನು ಪ್ರತಿ ದಿನ ತಪ್ಪದೆ ಅನುಸರಿಸುತ್ತ ಬಂದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆಟ್ಟ ದೃಷ್ಟಿ, ಮನೆ ಹಾಗೂ ಮನೆಯವರ ಮೇಲೆ ಬೀಳೋದಿಲ್ಲ.

ಗ್ರಂಥಗಳಲ್ಲಿ ದಕ್ಷಿಣ ಮುಖದ ಶಂಖಕ್ಕೆ ಹೆಚ್ಚು ಮಹತ್ವವಿದೆ. ವಿಧಿ-ವಿಧಾನದ ಮೂಲಕ ಇದ್ರ ಪೂಜೆ ಮಾಡಿದ್ರೆ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ.

ಮನೆಯಲ್ಲಿ ದಕ್ಷಿಣ ಮುಖದ ಶಂಖವಿಟ್ರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯ ಮಹಿಳೆ ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ದಕ್ಷಿಣ ಮುಖದ ಶಂಖದಿಂದ ಮನೆಯನ್ನು ಶುದ್ಧಗೊಳಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲು ಕೆಂಪು ಬಣ್ಣದ ಬಟ್ಟೆಯಲ್ಲಿ ದಕ್ಷಿಣ ಮುಖದ ಶಂಖವನ್ನು ಇಡಬೇಕು. ಅದಕ್ಕೆ ಗಂಗಾ ಜಲವನ್ನು ಹಾಕಬೇಕು. ಧೂಪ-ದೀಪ ಹಚ್ಚಿ ಶಂಖವನ್ನು ಪೂಜೆ ಮಾಡಿ.

ಶಂಖದ ಮುಂದೆ ಕುಳಿತು ಮಂತ್ರ ಜಪಿಸಿದ ನಂತ್ರ ಮನೆ, ಮಕ್ಕಳು, ಪತಿ ಮೇಲೆ ಪ್ರೋಕ್ಷಣೆ ಮಾಡಿ. ಈ ಉಪಾಯವನ್ನು ಪ್ರತಿ ದಿನ ಮಾಡುವುದ್ರಿಂದ ನಕಾರಾತ್ಮಕ ಶಕ್ತಿ ದೂರವಾಗಿ ದೃಷ್ಟಿ ಬೀಳುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular