ದೋಷ ನಿವಾರಣೆಗೆ ಏಲಕ್ಕಿ ಯಿಂದ ಹೀಗೆ ಮಾಡಿ ‘ಲಾಭ’ ಪಡೆಯಿರಿ

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ ಸುಖ ಹಾಗೂ ಸಂಪತ್ತಿನ ವೃದ್ಧಿಯಾಗುತ್ತದೆ. ರೋಗ ನಾಶವಾಗುವ ಜೊತೆಗೆ ವೃತ್ತಿಯಲ್ಲಿ ಯಶಸ್ಸು ಲಭಿಸುತ್ತದೆ.

ಪತಿ-ಪತ್ನಿಯ ನಡುವೆ ಪ್ರೀತಿ ಕಡಿಮೆಯಾಗಿದ್ದರೆ ಶುಕ್ರವಾರ ಶ್ರೀಕೃಷ್ಣನ ಜಪ ಮಾಡಿ ಮೂರು ಏಲಕ್ಕಿಯನ್ನು ದೇಹಕ್ಕೆ ಸ್ಪರ್ಶಿಸಿ ಕರವಸ್ತ್ರದಲ್ಲಿ ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ. ಶನಿವಾರ ಬೆಳಿಗ್ಗೆ ಏಲಕ್ಕಿ ಪುಡಿ ಮಾಡಿ ಅದನ್ನು ಯಾವುದಾದ್ರೂ ಆಹಾರಕ್ಕೆ ಬೆರೆಸಿ ಪತಿಗೆ ನೀಡಿ. ಈ ಕ್ರಮವನ್ನು ಮೂರು ಶುಕ್ರವಾರ ಮಾಡಿದ್ರೆ ಲಾಭ ಕಾಣಬಹುದು. ಭಾನುವಾರ ಕೂಡ ಇದನ್ನು ಮಾಡಬಹುದು.

ಏಳು ಏಲಕ್ಕಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ 7 ಗುರುವಾರ ವಿಷ್ಣುವಿನ ಮಂದಿರಕ್ಕೆ ಅರ್ಪಿಸಿ. ಹೀಗೆ ಮಾಡಿದ್ರೆ ಸುಂದರ ಹಾಗೂ ಬುದ್ದಿವಂತ ಪತ್ನಿ ಸಿಗ್ತಾಳೆ.

ಆರ್ಥಿಕ ವೃದ್ಧಿಗೆ ಪರ್ಸ್ ನಲ್ಲಿ 5 ಏಲಕ್ಕಿಯನ್ನು ಸದಾ ಇಟ್ಟುಕೊಳ್ಳಿ.

ಮಹತ್ವಪೂರ್ಣ ಕಾರ್ಯಕ್ಕಾಗಿ ಹೊರಗೆ ಹೋಗುವವರಿದ್ದರೆ ಸೂರ್ಯಾಸ್ತದ ವೇಳೆ ಬಲಗೈನಲ್ಲಿ ಸ್ವಲ್ಪ ಏಲಕ್ಕಿ ತೆಗೆದುಕೊಂಡು ಶ್ರೀಶ್ರೀ ಎಂದು ಹೇಳಿ ಏಲಕ್ಕಿ ತಿಂದು ಹೊರಗೆ ಹೋಗಿ.

ಶುಕ್ರಗ್ರಹ ದುರ್ಬಲವಾಗಿದ್ದರೆ ಒಂದು ಲೋಟ ನೀರಿಗೆ ಎರಡು ದೊಡ್ಡ ಏಲಕ್ಕಿ ಹಾಕಿ ಅರ್ಧ ಲೋಟವಾಗುವವರೆಗೆ ಕುದಿಸಿ. ಇದನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿ. ಜೊತೆಗೆ ಶುಕ್ರನ ಮಂತ್ರವನ್ನು ಜಪಿಸಿ. ಇದ್ರಿಂದ ರೋಗ ಕಡಿಮೆಯಾಗುತ್ತದೆ.

ಓದಿನಲ್ಲಿ ಏಕಾಗ್ರತೆ ಕೊರತೆ ಕಂಡು ಬಂದಲ್ಲಿ ಹಾಲಿಗೆ ಏಲಕ್ಕಿ ಹಾಕಿ ಕುದಿಸಿ 7 ಗುರುವಾರ ಬಡ ಮಕ್ಕಳಿಗೆ ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read