HomeBeautyಫಿಟ್ ನೆಸ್ ಕಾಳಜಿ ಇರುವವರು ಅತಿಯಾಗಿ ಆಹಾರ ಸೇವಿಸಿದ್ರೆ ಹೀಗೆ ಮಾಡಿ

ಫಿಟ್ ನೆಸ್ ಕಾಳಜಿ ಇರುವವರು ಅತಿಯಾಗಿ ಆಹಾರ ಸೇವಿಸಿದ್ರೆ ಹೀಗೆ ಮಾಡಿ

ಮದುವೆ, ಹಾಗೂ ಇನ್ನಿತರ ಸಮಾರಂಭಕ್ಕೆ ಹೋದಾಗ ನಿಮಗಿಷ್ಟವಾದ ಆಹಾರವನ್ನು ಅತಿಯಾಗಿ ಸೇವಿಸುತ್ತೀರಿ. ಇದರಿಂದ ನಿಮ್ಮ ತೂಕ ಹೆಚ್ಚಾಗಬಹುದೆಂಬ ಭಯ ಕಾಡುತ್ತದೆ. ಆದರೆ ಫಿಟ್ ನೆಸ್ ಬಗ್ಗೆ ಚಿಂತೆ ಇರುವವರು ಅತಿಯಾಗಿ ಆಹಾರ ಸೇವಿಸಿದ ಬಳಿಕ ಈ ನಿಯಮ ಪಾಲಿಸಿ.

*ಅತಿಯಾಗಿ ಆಹಾರ ಸೇವಿಸಿದ್ದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೆಚ್ಚು ಚಿಂತಿಸಬೇಡಿ. ಒತ್ತಡಕ್ಕೆ ಒಳಗಾಗಬೇಡಿ. ಇದರಿಂದ ನಿಮ್ಮ ತೂಕ ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ಒತ್ತಡಕ್ಕೆ ಒಳಗಾಗದೆ ಸಕರಾತ್ಮಕವಾಗಿ ಯೋಚಿಸಿ.

*ಪಾರ್ಟಿಯಲ್ಲಿ ಇಷ್ಟಪಟ್ಟ ಆಹಾರ ಸೇವಿಸಿದ ಬಳಿಕ ಲಘ ವ್ಯಾಯಾಮ ಮಾಡಿ. ಓಟ, ವಾಕಿಂಗ್ ಇತ್ಯಾದಿ ಮಾಡಬಹುದು. ಇದರಿಂದ ನಿಮ್ಮ ಒತ್ತಡವು ಕಡಿಮೆಯಾಗುತ್ತದೆ, ತೂಕ ಹೆಚ್ಚಾಗುವುದನ್ನು ನಿಯಂತ್ರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಪಾರ್ಟಿಯಲ್ಲಿ ತಿಂದ ಮರುದಿನ ಅತಿ ಹೆಚ್ಚು ನೀರನ್ನು ಸೇವಿಸಿ. ಎಳನೀರು, ಜೀರಿಗೆ ಕಷಾಯ ಮುಂತಾದವುಗಳನ್ನು ಸೇವಿಸಿ. ಇದರಿಂದ ದೇಹದಲ್ಲಿ ಸೇರಿಕೊಂಡ ಕೊಬ್ಬು ಕರಗುತ್ತದೆ.

*ಹೆಚ್ಚು ಫೈಬರ್ ಯುಕ್ತ ಆಹಾರ ಸೇವಿಸಿ. ಇದು ನಿಮ್ಮ ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಕರುಳಿನಲ್ಲಿ ಸೇರಿಕೊಂಡ ಅನಗತ್ಯ ವಸ್ತುಗಳನ್ನು ಹೊರಹಾಕುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular