HomeAstroವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಮಾಡಿ ಈ ಕೆಲಸ

ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ವೃತಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೆಲವೊಂದು ಸಮಸ್ಯೆಗಳು ನಮ್ಮನ್ನು ಹೈರಾಣ ಮಾಡಿಬಿಡುತ್ತದೆ.

ಉದ್ಯೋಗ ಸಮಸ್ಯೆ ಕೂಡ ಇದ್ರಲ್ಲಿ ಒಂದು. ಎಷ್ಟು ಪ್ರಯತ್ನಪಟ್ಟರೂ ಕೆಲವರಿಗೆ ಉದ್ಯೋಗದಲ್ಲಿ ಯಶ ಸಿಗುವುದಿಲ್ಲ. ಶಾಸ್ತ್ರದಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲು ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉದ್ಯೋಗಕ್ಕಾಗಿ ಏಳು ಶನಿವಾರ ವೃತ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. 7 ಶನಿವಾರ ಬೆಳಗ್ಗೆ ಎದ್ದ ನಂತ್ರ ಸಾಸಿವೆ ಎಣ್ಣೆಯಲ್ಲಿ ಮುಖ ನೋಡಿ ಆ ಸಾಸಿವೆ ಎಣ್ಣೆಯನ್ನು ದಾನ ನೀಡಬೇಕು.

ವೃತ ಮಾಡಿದ ಶನಿವಾರ ಕೇವಲ ದ್ರವ ಆಹಾರವನ್ನು ಮಾತ್ರ ಸೇವಿಸಬೇಕು. ಅನ್ನ ತಿನ್ನುವುದ್ರಿಂದ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಸಂಜೆ ವೇಳೆ ಅಶ್ವತ್ಥ ಪೂಜೆ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಅಶ್ವತ್ಥ ಮರಕ್ಕೆ ತೈಲ ಅರ್ಪಿಸುವ ಜೊತೆಗೆ ಸಾಸಿವೆ ಎಣ್ಣೆ ದೀಪ ಹಚ್ಚಬೇಕು. ನಂತ್ರ ಶನಿ ಮಂತ್ರವನ್ನು 108 ಬಾರಿ ಜಪಿಸಬೇಕು.

ರಾತ್ರಿ ಉದ್ದಿನ ಬೇಳೆ ಕಿಚಡಿಯನ್ನು ಸೇವನೆ ಮಾಡಬಹುದು. ಇದ್ರಿಂದ ನೌಕರಿಯ ಪ್ರತಿಯೊಂದು ಸಮಸ್ಯೆ ದೂರವಾಗಲಿದೆ. ನಿಮ್ಮಿಷ್ಟದ ನೌಕರಿ ಬಯಸುವವರು ಸೋಮವಾರ ಶಿವನಿಗೆ ಸಿಹಿ ಹಾಲು, ಅಕ್ಕಿಯನ್ನು ಅರ್ಪಿಸಬೇಕು. ಮಂಗಳವಾರ ಹನುಮಾನ್ ಚಾಲೀಸ್ ಓದುವುದ್ರಿಂದಲೂ ಬಯಸಿದ ನೌಕರಿ ಸಿಗುತ್ತೆ ಎಂದು ನಂಬಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular