ವಾಟ್ಸಾಪ್‌ನಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಮುಲಾಜಿಲ್ಲದೆ ನಿಮ್ಮ ಖಾತೆ ಬ್ಯಾನ್‌ !

ವಾಟ್ಸಾಪ್‌ನಲ್ಲಿ ಅನಾಹುತಕಾರಿ ಸಂದೇಶಗಳನ್ನು ಹಂಚುವವರ ಖಾತೆಗಳನ್ನು ಮೆಟಾ ಸಂಸ್ಥೆ ಬ್ಯಾನ್ ಮಾಡುತ್ತಿದೆ. ಫೆಬ್ರವರಿಯಲ್ಲಿ ಭಾರತದಲ್ಲಿ ಸುಮಾರು 97 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.

ಪ್ರಸ್ತುತ ದಿನಗಳಲ್ಲಿ ವಾಟ್ಸಾಪ್ ಅತ್ಯಂತ ಅವಶ್ಯಕವಾದ ಅಪ್ಲಿಕೇಶನ್ ಆಗಿದೆ. ದಿನನಿತ್ಯದ ಅನೇಕ ಕಾರ್ಯಗಳಲ್ಲಿ ಇದರ ಸಹಾಯವನ್ನು ಪಡೆಯುತ್ತೇವೆ. ಆದರೆ, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ, ನಿಮ್ಮ ವಾಟ್ಸಾಪ್ ಖಾತೆಯನ್ನು ಬ್ಯಾನ್ ಮಾಡಬಹುದು.

ಇತ್ತೀಚೆಗೆ ಫೆಬ್ರವರಿಯಲ್ಲಿ ಮೆಟಾ ಸಂಸ್ಥೆ ಸುಮಾರು 97 ಲಕ್ಷ ವಾಟ್ಸಾಪ್ ಖಾತೆಗಳನ್ನು ಬ್ಯಾನ್ ಮಾಡಿದೆ. ಈ ಖಾತೆಗಳಲ್ಲಿ ಸುಮಾರು 14 ಲಕ್ಷ ಖಾತೆಗಳನ್ನು ಬಳಕೆದಾರರ ದೂರುಗಳಿಗಿಂತ ಮೊದಲು ತೆಗೆದುಹಾಕಲಾಗಿದೆ ಎಂದು ವಾಟ್ಸಾಪ್ ತಿಳಿಸಿದೆ.

ಭದ್ರತಾ ಕಾರಣಗಳು ಮತ್ತು ಪ್ಲಾಟ್‌ಫಾರ್ಮ್‌ನ ನಿಯಮಗಳ ಉಲ್ಲಂಘನೆಯಿಂದ ಈ ವಾಟ್ಸಾಪ್ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಟ್ಸಾಪ್ ತನ್ನ ಮಾಸಿಕ ಸುರಕ್ಷತಾ ವರದಿಯಲ್ಲಿ ತಿಳಿಸಿದೆ. ಸ್ಪ್ಯಾಮ್ ಮತ್ತು ನಕಲಿ ಸಂದೇಶಗಳನ್ನು ತಡೆಯಲು ಪ್ಲಾಟ್‌ಫಾರ್ಮ್‌ನ ನಿಯಮಗಳನ್ನು ನಿರಂತರವಾಗಿ ಕಟ್ಟುನಿಟ್ಟಾಗಿಸಲಾಗುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಬಳಕೆದಾರರಿಗೆ ಉತ್ತಮ, ಆನಂದದಾಯಕ ಮತ್ತು ಒತ್ತಡ ರಹಿತ ಸೇವೆಯನ್ನು ನೀಡಲು ಕೃತಕ ಬುದ್ಧಿಮತ್ತೆ, ಡೇಟಾ ವಿಜ್ಞಾನಿಗಳು, ಭದ್ರತಾ ವ್ಯವಸ್ಥೆಗಳು ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ವಾಟ್ಸಾಪ್ ತಿಳಿಸಿದೆ. ಬಳಕೆದಾರರು ವಂಚನೆಗೆ ಬಲಿಯಾಗದಂತೆ ಮತ್ತು ವಾಟ್ಸಾಪ್‌ನಲ್ಲಿ ಇಂತಹ ಚಟುವಟಿಕೆಗಳು ನಡೆಯದಂತೆ ತಡೆಯಲು ನಿಯಮಗಳನ್ನು ಉಲ್ಲಂಘಿಸುವ ಬಳಕೆದಾರರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ.

ಈ ತಪ್ಪುಗಳನ್ನು ವಾಟ್ಸಾಪ್‌ನಲ್ಲಿ ಮಾಡಬೇಡಿ

  • ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸಬೇಡಿ.
  • ಅಗತ್ಯವಿಲ್ಲದ ಸಂದೇಶಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡಬೇಡಿ.
  • ಬೇರೆಯವರನ್ನು ನೋಯಿಸುವ ಅಥವಾ ದ್ವೇಷಪೂರಿತ ವಿಷಯಗಳನ್ನು ಪೋಸ್ಟ್ ಮಾಡಬೇಡಿ.
  • ವಯಸ್ಕರ ವಿಷಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
  • ಕ್ರಿಮಿನಲ್ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಬೇಡಿ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read