ಶಾಂಪೂ ಬಳಸುವ ವೇಳೆ ಮಾಡಬೇಡಿ ಈ ತಪ್ಪು

ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಕೂದಲಿನ ಆರೋಗ್ಯದಲ್ಲಿ ಶಾಂಪೂ ಮಹತ್ವದ ಪಾತ್ರವಹಿಸುತ್ತದೆ. ಗುಣಮಟ್ಟದ ಶಾಂಪೂವಿನಿಂದ ಹಿಡಿದು ಶಾಂಪೂ ಬಳಕೆಯವರೆಗೆ ಎಲ್ಲವೂ ನಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ.

ಅನೇಕರು ಶಾಂಪೂವನ್ನು ನೇರವಾಗಿ ಕೂದಲಿಗೆ ಹಾಕಿ ಮಸಾಜ್ ಮಾಡ್ತಾರೆ. ಇದು ತಪ್ಪು. ಮೊದಲು ಶಾಂಪೂ ಬಳಸುವುದು ಹೇಗೆ ಎಂಬುದನ್ನು ತಿಳಿಯಬೇಕು. ಒಂದು ಮಗ್ ಗೆ ನೀರನ್ನು ಹಾಕಿ, ಅದಕ್ಕೆ ಶಾಂಪೂ ಹಾಕಿ ಚೆನ್ನಾಗಿ ಕಲಕಿ. ನಂತರ ಆ ನೀರನ್ನು ತಲೆಗೆ ಹಾಕಿ ಮಸಾಜ್ ಮಾಡಿ.

ಶಾಂಪೂ ಬಳಸಿದ ನಂತ್ರ ಕಂಡಿಷನರ್ ಬಳಸಿ. ನೆತ್ತಿಯ ಮೇಲೆ ಕಂಡಿಷನರ್ ಹಾಕಬೇಡಿ. ಕೂದಲಿನ ತುದಿಗೆ ಕಂಡಿಷನರ್ ಹಾಕಿ ಮಸಾಜ್ ಮಾಡಿ. ಕಂಡಿಷನರ್ ಹಾಕಿ 2 ನಿಮಿಷದ ನಂತ್ರ ತಲೆ ಸ್ವಚ್ಛಗೊಳಿಸಿ.

ಕೆಲವರು ಪ್ರತಿ ದಿನ ಶಾಂಪೂ ಬಳಸುತ್ತಾರೆ. ಪ್ರತಿ ದಿನ ಶಾಂಪೂ ಬಳಸುವುದ್ರಿಂದ ಕೂದಲು ಹೆಚ್ಚಿನ ಸಂಖ್ಯೆಯಲ್ಲಿ ಉದುರುತ್ತದೆ.

ಗಿಡಮೂಲಿಕೆ ಮತ್ತು ಆಯುರ್ವೇದ ಶಾಂಪೂಗಳನ್ನು ಬಳಸಬೇಕು. ರಾಸಾಯನಿಕ ಶಾಂಪೂ ಬಳಸಬೇಡಿ. ಇದು ಕೂದಲುದುರುವ ಸಮಸ್ಯೆಯನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read