HomeAstroಸಕರಾತ್ಮಕ ಶಕ್ತಿ ಸೆಳೆಯಲು ಇಂತಹ ವಸ್ತುಗಳನ್ನ ಮನೆಯಲ್ಲಿ ಇಡಲೇಬೇಡಿ

ಸಕರಾತ್ಮಕ ಶಕ್ತಿ ಸೆಳೆಯಲು ಇಂತಹ ವಸ್ತುಗಳನ್ನ ಮನೆಯಲ್ಲಿ ಇಡಲೇಬೇಡಿ

ನಾವು ಎಷ್ಟೇ ಜಾಗರೂಕರಾಗಿ ಇದ್ದರೂ ಸಹ ಕೆಲವೊಮ್ಮೆ ನಮ್ಮ ಅರಿವಿಗೆ ಬಾರುವ ಮುನ್ನವೇ ದೇವರ ಮೂರ್ತಿ ಅಥವಾ ಫೋಟೋಗಳು ಬಿರುಕು ಬಿಟ್ಟುಬಿಡುತ್ತವೆ. ಆದರೆ ಅನೇಕರು ಈ ಬಿರುಕಿನ ಬಗ್ಗೆ ಹೆಚ್ಚು ಮಹತ್ವ ನೀಡದೇ ಅದೇ ಫೋಟೋವನ್ನ ಪೂಜೆ ಮಾಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದನ್ನ ತಪ್ಪು ಎಂದು ಪರಿಗಣಿಸಲಾಗಿದೆ.

ಬಿರುಕುಬಿಟ್ಟ ಅಥವಾ ತುಂಡಾದ ದೇವರ ವಿಗ್ರಹಗಳು ಮನೆಯ ಒಳಗೆ ಇರೋದನ್ನ ಅಪಶಕುನ ಎಂದು ಹೇಳಲಾಗುತ್ತದೆ. ಇಂತಹ ಫೋಟೋ ಅಥವಾ ವಿಗ್ರಹಗಳನ್ನ ಆದಷ್ಟು ಬೇಗ ನೀರಿನಲ್ಲಿ ವಿಸರ್ಜನೆ ಮಾಡಿ ಅಥವಾ ಅಶ್ವತ್ಥ ಮರದ ಕೆಳಗೆ ಇಡಿ. ಹಾಳಾದ ದೇವರ ವಿಗ್ರಹಗಳು ಮನೆಯಲ್ಲಿ ನಕರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

ಕೇವಲ ದೇವರ ವಿಗ್ರಹ ಮಾತ್ರವಲ್ಲದೇ ಹಾಳಾದ ಬಲ್ಬ್​​ಗಳನ್ನೂ ಮನೆಯಲ್ಲಿ ಇಟ್ಟುಕೊಳ್ಳೋದು ವಾಸ್ತು ಶಾಸ್ತ್ರದ ಪ್ರಕಾರ ಅಪಶಕುನ ಎಂದು ಹೇಳಲಾಗುತ್ತದೆ. ಈ ರೀತಿ ಮಾಡೋದ್ರಿಂದ ಮನೆಯಲ್ಲಿ ಆರ್ಥಿಕವಾಗಿ ಕಷ್ಟ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ವಸ್ತುಗಳನ್ನ ಮನೆಯಲ್ಲಿ ಇಡಲೇಬೇಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular