ಚಿರತೆಗಳು ತಮ್ಮ ಬೇಟೆಯನ್ನು ಹೊಂಚು ಹಾಕಿ ಹಿಡಿಯುತ್ತವೆ. ಇದೀಗ ವಸತಿ ಪ್ರದೇಶವೊಂದರಲ್ಲಿ ಚಿರತೆ ಹೊಂಚು ಹಾಕಿ ಬೇಟೆಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಹೊರಾಂಗಣದಲ್ಲಿ ಮಂಚದ ಮೇಲೆ ಮಲಗಿರುವ ದೃಶ್ಯಗಳನ್ನು ತೋರಿಸುತ್ತದೆ. ಕೆಲವೇ ಹೆಜ್ಜೆಗಳ ದೂರದಲ್ಲಿ ನಾಯಿಯೊಂದು ಮಲಗಿದೆ. ಈ ವೇಳೆ ಮೆಲ್ಲನೆ ಹೆಜ್ಜೆಯಿಡುತ್ತಾ ಚಿರತೆ ನಾಯಿಯಿದ್ದಲ್ಲಿಗೆ ಬಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳದಂತೆ ತನ್ನ ಬೇಟೆಗೆ ತೊಂದರೆಯಾಗದಂತೆ ನಿಧಾನಕ್ಕೆ ಚಿರತೆ ಹೆಜ್ಜೆಯಿಟ್ಟಿದ್ದು, ಶ್ವಾನದ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ದಿದೆ. ನಾಯಿಯ ಕೂಗಿಗೆ ವ್ಯಕ್ತಿ ನಿದ್ದೆಯಿಂದ ಎಚ್ಚೆತ್ತಿದ್ದಾನೆ. ಈ ವೇಳೆ ನಾಯಿಯನ್ನು ಹಿಡಿದು ಚಿರತೆ ಓಡಿದೆ.
ಚಿರತೆ ಹೇಗೆ ಮಲಗಿದ್ದ ವ್ಯಕ್ತಿಯನ್ನು ಬಿಟ್ಟು ನಾಯಿಯ ಮೇಲೆ ದಾಳಿ ನಡೆಸಿತು ಎಂಬುದನ್ನು ಐಎಫ್ಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ. ಮಾನವ ಪ್ರಾಬಲ್ಯದ ಭೂದೃಶ್ಯದಲ್ಲಿ ಚಿರತೆಯ ನೆಚ್ಚಿನ ಆಹಾರವು ನಾಯಿಗಳಾಗಿ ಕಂಡುಬರುತ್ತದೆ. ಪುಣೆಯಲ್ಲಿ, ಶಾಂತಿಯುತವಾಗಿ ಮಲಗಿರುವ ವ್ಯಕ್ತಿಗೆ ಯಾವುದೇ ಹಾನಿಯಾಗುವುದಿಲ್ಲ. ಅದು ತನ್ನ ಉಳಿವಿಗಾಗಿ ನಾಯಿಯನ್ನು ಆಹಾರವಾಗಿ ಸ್ವೀಕರಿಸಿತು ಎಂದು ಅವರು ವಿಡಿಯೋವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.
ಈ ವಿಡಿಯೋ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ, ವೈರಲ್ ಆಗಿದೆ. ಸಹಜವಾಗಿ ಈ ವಿಡಿಯೋ ನೆಟ್ಟಿಗರನ್ನು ಭೀತಿಗೊಳಿಸಿದೆ. ಚಿರತೆ ಪ್ರೇಮಿಯೊಬ್ಬರು ಪರಭಕ್ಷಕನ ಬೇಟೆಯ ತಂತ್ರವನ್ನು ಶ್ಲಾಘಿಸಿದ್ದಾರೆ, ನಾಯಿಯನ್ನು ಹಿಡಿದ ನಂತರ ಅದು ಓಡಿಹೋಗುವ ವೇಗವು ಅದ್ಭುತವಾಗಿದೆ. ಅದರ ನಿರ್ಗಮನ ಮಾರ್ಗದ ಬಗ್ಗೆ ಎಷ್ಟು ಸ್ಪಷ್ಟವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಬರೆದಿದ್ದಾರೆ.
https://twitter.com/susantananda3/status/1659039211289464834?ref_src=twsrc%5Etfw%7Ctwcamp%5Etweetembed%7Ctwterm%5E165
https://twitter.com/meetvabby/status/1659053633877712896?ref_src=twsrc%5Etfw%7Ctwcamp%5Etweetembed%7Ctwterm%5E1659053633877712896%7Ctwgr%5E0da52f8a6f888333798993ee43a47b526918caf9%7Ctwcon%5Es1_&ref_url=https%3A%2F%2Fwww.news18.com%2Fviral%2Fdo-leopards-prefer-dog-over-humans-as-their-prey-terrifying-hunt-video-drops-hint-7851967.html
https://twitter.com/susantananda3/status/1659039211289464834?ref_src=twsrc%5Etfw%7Ctwcamp%5Etweetembed%7Ctwterm%5E1659060996063870980%7Ctwgr%5E0da52f8a6f888333798993ee43a47b526918caf9%7Ctwcon%5Es2_&ref_url=https%3A%2F%2Fwww.news18.com%2Fviral%2Fdo-leopards-prefer-dog-over-humans-as-their-prey-terrifying-hunt-video-drops-hint-7851967.html